shastri ಕ್ರಿಕೆಟ್ ಕೋಚ್ ಹುದ್ದೆ: ಶಾಸ್ತ್ರಿಗೆ ಐವರಿಂದ ಪೈಪೋಟಿ, ಶುಕ್ರವಾರ ಆಯ್ಕೆ

shastri
six in race for indian coach job

shastri ಅಂತಿಮ ರೇಸ್‌ನಲ್ಲಿ ಶಾಸ್ತ್ರಿ ಸೇರಿ ಆರು ಮಂದಿ 

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆ ಉಳಿಸಿಕೊಳ್ಳಲು ಮಾಜಿ ಕಪ್ತಾನ ( shastri ) ರವಿ ಶಾಸ್ತ್ರಿ ಇತರ ಐವರ ಜೊತೆ ಪೈಪೋಟಿ ನಡೆಸಬೇಕಿದೆ.

ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದ ಕೋಚ್ ರೇಸಿನಲ್ಲಿ ಮೂವರು ಕನ್ನಡಿಗರು

ಭಾರತ ತಂಡದ ಕೋಚ್ ಸ್ಥಾನಕ್ಕೆ ಆಯ್ಕೆ ಬಯಸಿ ಸಲ್ಲಿಸಲಾಗಿದ್ದ ಅರ್ಜಿಗಳ ಪ್ರಾಥಮಿಕ ಪರಿಶೀಲನೆ ಮುಗಿದಿದ್ದು ಶಾಸ್ತ್ರಿ ಸೇರಿ ಆರು ಮಂದಿಉ ಅಂತಿಮ ಪಟ್ಟಿ ಸಿದ್ಧವಾಗಿದೆ.

ಭಾರತೀಯ ಕ್ರಿಕೆಟ್‌ನ ದಂತಕಥೆ ಕಪಿಲ್ ದೇವ್ ನೇತೃತ್ವದ ಮೂವರು ಮಾಜಿ ಆಟಗಾರರ ವಿಶೇಷ ಸಮಿತಿ ರಾಷ್ಟ್ರೀಯ ತಂಡದ ಕೋಚ್‌ ಯಾರೆಂಬುದನ್ನು ನಿರ್ಧರಿಸಲಿದೆ.

ತಂಡದ ಆಟಗಾರರ ವಿಶ್ವಾಸ ಸಂಪಾದಿಸಿರುವ ರವಿ ಶಾಸ್ತ್ರಿ ಅವರಲ್ಲದೆ ಈ ಸ್ಥಾನಕ್ಕೆ ಅರ್ಜಿ ಹಾಕಿಕೊಂಡಿದ್ದವರ ಪೈಕಿ ಐದು ಮಂದಿಯನ್ನು ಈ ಸಮಿತಿ ಶುಕ್ರವಾರ ಸಂದರ್ಶಿಸಲಿದೆ.

ಈ ಪ್ರತಿಷ್ಠಿತ ಹುದ್ದೆಗೇರ ಬಯಸಿರುವವರ ಪಟ್ಟಿಯಲ್ಲಿ ಶಾಸ್ತ್ರಿ ಅಲ್ಲದೇ ನ್ಯೂಜಿಲೆಂಡ್ ತಂಡದ ಮಾಜಿ ಕೋಚ್ ಮೈಕ್ ಹೆಸ್ಸನ್, ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಶ್ರೀಲಂಕಾದ ಮಾಜಿ ಕೋಚ್ ಟಾಮ್ ಮೂಡಿ, ಭಾರತದ ಮಾಜಿ ಆಟಗಾರರಾದ ಲಾಲ್‌ಚಂದ್ ರಾಜಪೂತ್, ರಾಬಿನ್ ಸಿಂಗ್ ಹಾಗೂ ವಿಂಡೀಸ್ ತಂಡದ ಮಾಜಿ ಆಟಗಾರ ಫಿಲ್ ಸಿಮನ್ಸ್ ಇದ್ದಾರೆ.

ಭಾರತ ತಂಡಕ್ಕೆ ಕೋಚ್ ಆಯ್ಕೆ ಮಾಡುವ ಗುರುತರ ಹೊಣೆ ಹೊತ್ತಿರುವ ಸಮಿತಿಯಲ್ಲಿ ಕಪಿಲ್ ದೇವ್ ಅಲ್ಲದೇ ಮಾಜಿ ಆರಂಭಿಕ ಆಟಗಾರ ಅನ್ಷುಮಾನ್ ಗಾಯಕ್ವಾಡ್ ಹಾಗೂ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಇದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...