sharath ಗೃಹಮಂಡಳಿ ಅಧ್ಯಕ್ಷತೆ ತಿರಸ್ಕರಿಸಿದ ಶರತ್ ಬಚ್ಚೇಗೌಡ

sharath
bjp ticket aspirant sharath bachchegowda

sharath ಮಂಡಳಿ ಪಟ್ಟ ಬೇಕಿಲ್ಲ, ನನಗೆ ಬೇಕಿರೋದು ಪಕ್ಷದ ಟಿಕೆಟ್: ಶರತ್

ಹೊಸಕೋಟೆ: ಗೃಹಮಂಡಳಿಯ ಅಧ್ಯಕ್ಷತೆಯನ್ನು ಹೊಸಕೋಟೆಯ ( sharath) ಪರಾಜಿತ ಬಿಜೆಪಿ ಅಭ್ಯರ್ಥಿ ಶರತ್ ಬಚ್ಚೇಗೌಡ ತಿರಸ್ಕರಿಸಿದ್ದಾರೆ. ಉಪಚುನಾವಣೆಯಲ್ಲಿ ತಮಗೇ ಬಿಜೆಪಿ ಟಿಕೆಟ್ ಬೇಕೆಂದು ಶರತ್ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಅನರ್ಹರ ಕೈಲಿ ಸೋತಿದ್ದವರಿಗೆ ಯಡಿಯೂರಪ್ಪ ಬಂಪರ್ ಕೊಡುಗೆ

ಕಳೆದ ಚುನಾವಣೆಯಲ್ಲಿ ತಮ್ಮ ಮೇಲೆ ಗೆದ್ದಿದ್ದ ಎಂಟಿಬಿ ನಾಗರಾಜ್ ಪರ ಯಾವುದೇ ಕಾರಣಕ್ಕೂ ಕೆಲಸ ಮಾಡಲು ಸಾಧ್ಯವಿಲ್ಲ. ಬಿಜೆಪಿ ನನಗೇ ಟಿಕೆಟ್ ನೀಡಬೇಕು. ಇಲ್ಲದಿದ್ದರೂ ನಾನು ಸ್ಪರ್ಧೆ ಮಾಡುವುದಂತೂ ನಿಶ್ಚಿತ ಎಂದು ಶರತ್ ಹೇಳಿದ್ದಾರೆ

ಮುಖ್ಯಮಂತ್ರಿಗಳು ನನಗೆರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಇದಕ್ಕಾಗಿ ನಾನೂ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ. ಆದರೆ ನಾನು ಹುದ್ದೆ ಸ್ವೀಕರಿಸುವುದಿಲ್ಲ ಎಂದು ಶರತ್ ಬಚ್ಚೇಗೌಡ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಈ ಮಧ್ಯೆ ಶರತ್ ಬಚ್ಚೇಗೌಡರನ್ನು ತಮ್ಮತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರಯತ್ನ ನಡೆಸಿವೆಯಾದರೂ ಶರತ್ ಬಚ್ಚೇಗೌಡರು ಪಕ್ಷೇತರರಾಗಿಯೇ ಸ್ಪರ್ಧೆ ಮಾಡುತ್ತಾರೆ ಎಂದು ಅವರ ನಿಕಟ ಮೂಲಗಳು ಹೇಳಿವೆ.

ಬುಧವಾರ ಮಧ್ಯಾಹ್ನವಷ್ಟೇ ಕಳೆದ ಚುನಾವಣೆಯಲ್ಲಿ ಪರಾಜಿತರಾದ ಎಂಟು ಬಿಜೆಪಿ ಅಭ್ಯರ್ಥಿಗಳಿಗೆ ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದರು. ಶರತ್ ಬಚ್ಚೇಗೌಡರಿಗೆ ಆಯಕಟ್ಟಿನ ಗೃಹ ಮಂಡಳಿ ಅಧ್ಯಕ್ಷತೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...