sharan ಅಮೆರಿಕದಲ್ಲಿ ಅಧ್ಯಕ್ಷರ ಹಾಡು-ಪಾಡು

Sharan and Ragini in Adhyaksha in America

sharan ದೊಡ್ಡೂರಲ್ಲಿ ಶರಣ್-ರಾಗಿಣಿ ಲವ್ವಿ-ಡವ್ವಿ

ಬೆಂಗಳೂರು: ಅಧ್ಯಕ್ಷ ಶರಣ್ ಅವರ ಬಹು ನಿರೀಕ್ಷಿತ ಹೊಸ ಚಿತ್ರ ( sharan ) ಅಧ್ಯಕ್ಷ ಇನ್ ಅಮೆರಿಕ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿ ನಿರತವಾಗಿದೆ. ಭರ್ಜರಿ ಹಿಟ್ ಸಿನೆಮಾ ಅಧ್ಯಕ್ಷ ಹೆಸರನ್ನೇ ಬಳಸಿಕೊಂಡಿರುವ ಅಧ್ಯಕ್ಷ ಇನ್ ಅಮೆರಿಕಕ್ಕೆ ಹೊರದೇಶದಲ್ಲಿ ವ್ಯಾಪಕವಾಗಿ ಚಿತ್ರೀಕರಣ ಮಾಡಲಾಗಿದೆ.

ಇದನ್ನೂ ಓದಿ: ವರ್ಷಾಂತ್ಯಕ್ಕೆ ’ಮದಕರಿ ನಾಯಕ’ನಾಗಿ ಕಂಗೊಳಿಸಲಿದ್ದಾರೆ ದರ್ಶನ್

ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾ ಸದ್ಯ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ‘ರ್ಯಾಂಬೊ-2’, ‘ವಿಕ್ಟರಿ-2’ ಸಿನಿಮಾಗಳ ಗೆಲುವಿನ ಸಕ್ಸಸ್ ನಲ್ಲಿರುವ ಶರಣ್ ಈಗ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ.

ಈ ನಡುವೆ ಈ ಚಿತ್ರಕ್ಕೂ ‘ಅಧ್ಯಕ್ಷ’ ಚಿತ್ರಕ್ಕೂ ಯಾವುದೆ ಸಂಬಂಧ ಇಲ್ಲ. ಬಹುತೇಕ ಚಿತ್ರೀಕರಣ ಅಮೆರಿಕದಲ್ಲೆ ಮಾಡಲಾಗಿದೆಯಂತೆ. ವಿಶೇಷ ಅಂದ್ರೆ ಚಿತ್ರದಲ್ಲಿ ಶರಣ್‌ಗೆ ನಾಯಕಿಯಾಗಿ ಇದೇ ಮೊದಲ ಬಾರಿ ರಾಗಿಣಿ ತೆರೆ ಹಂಚಿಕೊಂಡಿದ್ದಾರೆ.

ಯೋಗಾನಂದ್ ಮುದ್ದಣ್ಣ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು ಇದೇ ಮೊದಲ ಬಾರಿ ಶರಣ್ ಅಭಿನಯದ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶರಣ್, ರಾಗಿಣಿ ಅಲ್ಲದೇ ಸಾಧುಕೋಕಿಲಾ, ರಂಗಾಯಣ ರಘು, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ದೊಡ್ಡ ಹಾಸ್ಯ ಕಲಾವಿದರ ಬಳಗವೇ ಚಿತ್ರದಲ್ಲಿದೆ.

ಅಧ್ಯಕ್ಷ ಇನ್ ಅಮೆರಿಕದ ಕೆಲವು ಸ್ಟಿಲ್ಸ್‌ ಇಲ್ಲಿವೆ

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...