shanmuga ವಿಕ್ರಂ ಲ್ಯಾಂಡರ್ನ ಅವಶೇಷಗಳನ್ನು ಪತ್ತೆ ಮಾಡಿದ ಷಣ್ಮುಖ
ಚೆನ್ನೈ: ಕಳೆದ ಕೆಲವು ತಿಂಗಳ ಹಿಂದೆ ಚಂದ್ರನಂಗಳದಲ್ಲಿ ಕಳೆದುಹೋಗಿದ್ದ ಭಾರತದ ( shanmuga ) ಬಹು ನಿರೀಕ್ಷೆಯ ಚಂದ್ರಯಾನ-2ರ ಲ್ಯಾಂಡರ್ ಪತ್ತೆಯಾಗಿದೆ. ಇಸ್ರೊ ಮತ್ತು ಅಮೆರಿಕದ ನಾಸಾ ವಿಜ್ಞಾನಿಗಳು ಕಣ್ಣಿ ಎಣ್ಣೆ ಬಿಟ್ಟುಕೊಮಡು ಹುಡುಕಿದರೂ ಸಿಗದಿದ್ದ ಈ ವಿಕ್ರಮ ಚೆನ್ನೈನ ಹವ್ಯಾಸಿ ಖಗೋಳಜ್ಞನ ಕಣ್ಣಿಗೆ ಗೋಚರಿಸಿದೆ.
ಇದನ್ನೂ ಓದಿ: ಇನ್ನೂ ಒಂದು ತಿಂಗಳು ಕೈಗೆಟುಕದು ಈರುಳ್ಳಿ
ಚೆನ್ನೈನ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಷಣ್ಮುಖ ಸುಬ್ರಮಣಿಯನ್ ವಿಕ್ರಂ ಲ್ಯಾಂಡರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಕ್ರಂ ಏಕಾಏಕಿ ಪತ್ತೆಯಾಗಲಿಲ್ಲ. ಅದಕ್ಕಾಗಿ ಷಣ್ಮುಖ ಅವರು ಸುಮೇರು ನಾಲ್ಕೈದು ರಾತ್ರಿ ಚಂದ್ರ ಮೇಲೆ ಕಣ್ಣಿಡಬೇಕಾಯಿತು. ಅದೂ ದಿನಕ್ಕೆ ಆರೇಳು ತಾಸು ಇದೊಂದೇ ಅವರ ಕೆಲಸವಾಗಿತ್ತು.
ಹೀಗೆ ಚಂದ್ರನ ವೀಕ್ಷಣೆಯಲ್ಲಿ ತೊಡಗಿದ್ದಾಗ ಮೇಲ್ಮೈನ ಒಂದು ಭಾಗದಲ್ಲಿ ಏನೋ ಕುತೂಹಲಕಾರಿ ವಸ್ತು ಮತ್ತದರ ಅವಶೇಷಗಳು ಇರುವ ಸಂದೇಹ ಉಂಟಾಗಿ ಅದನ್ನು ಜಾಲಾಡಿದಾಗ ಅದುವೇ ವಿಕ್ರಂ ಲ್ಯಾಂಡರ್ ಎಂದು ಖಾತ್ರಿಯಾಯಿತು ಎನ್ನುತ್ತಾರೆ ಷಣ್ಮುಖ.
ಷಣ್ಮುಖ ಅವರು ಪತ್ತೆ ಹಚ್ಚಿರುವುದು ವಿಕ್ರಂ ಲ್ಯಾಂಡರ್ನ ಅವಶೇಷಗಳೇ ಎಂಬುದನ್ನು ನಾಸಾದ ವಿಜ್ಞಾನಿಗಳು ಮಂಗಳವಾರ ದೃಢಪಡಿಸಿದ್ದಾರೆ. ತಮ್ಮ ಈ ಸಾಧನೆ ಖಗೋಳ ವಿಜ್ಞಾನದ ಬಗ್ಗೆ ಯುವಕರಲ್ಲಿ ಆಸಕ್ತಿ ಕೆರಳಿಸಲು ಸ್ಪೂರ್ತಿಯಾದರೇ ಅದೇ ಸಾರ್ಥಕ ಎನ್ನುತ್ತಾರೆ ಷಣ್ಮುಖ.