shakib ಕಳ್ಳಾಟದ ಮಾಹಿತಿ ಮುಚ್ಚಿಟ್ಟ ಎಡವಟ್ಟು: ಬಾಂಗ್ಲಾ ಕ್ರಿಕೆಟ್ ನಾಯಕ ಶಕೀಬ್‌ಗೆ 2 ವರ್ಷ ನಿಷೇಧ

shakib
bangla cricket captain shakib

shakib ಒಂದು ವರ್ಷ ಶಿಕ್ಷೆ ಅಮಾನತ್ತಿನಲ್ಲಿರಿಸಿದ ಐಸಿಸಿ

ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ( shakib ) ಶಕೀಬ್ ಅಲ್ ಹಸನ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಎಲ್ಲ ಪ್ರಕಾರಗಳ ಆಟದಿಂದ ಎರಡು ವರ್ಷ ನಿಷೇಧಿಸಿದೆ. ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ ವಿಚಾರ ಮುಚ್ಚಿಟ್ಟ ಕಾರಣ ಶಕೀಬ್‌ಗೆ ಈ ನಿಷೇಧ ವಿಧಿಸಲಾಗಿದೆ.

ಇದನ್ನೂ ಓದಿ: ಬಾಂಗ್ಲಾ ಟಿ-20 ಸರಣಿಯಿಂದ ಕೊಹ್ಲಿಗೆ ವಿರಾಮ

ಶಕೀಬ್‌ರನ್ನು ಎರಡು ವರ್ಷ ನಿಷೇಧಿಸಿದ್ದರೂ ಒಂದು ವರ್ಷದ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿರುವ ಕಾರಣ ಅವರು ಒಂದು ವರ್ಷ ಮಾತ್ರ ನಿಷೇಧಕ್ಕೆ ಒಳಗಾಗಲಿದ್ದಾರೆ ಎಂದು ಐಸಿಸಿಯು ತನ್ನ ಅಧಿಕೃತ ಪಕ್ರಟಣೆಯಲ್ಲಿ ಸ್ಪಷ್ಟಪಡಿಸಿದೆ.

2018ರ ಜನವರಿಯಲ್ಲಿ ನಡೆದ ತ್ರಿಕೋನ ಸರಣಿ ಹಾಗೂ ಐಪಿಎಲ್‌ನ ಒಂದು ಪಂದ್ಯದ ವೇಳೆ ಬುಕ್ಕಿಗಳು ಶಕೀಬ್‌ ಅವರನ್ನು ಸಂಪರ್ಕಿಸಿ ಆಮಿಷ ಒಡ್ಡಿದ್ದರು. ಶಕೀಬ್ ಆಮಿಷಕ್ಕೆ ಬಲಿಯಾಗದಿದ್ದರೂ ಈ ವಿಚಾರವನ್ನು ಅಧಿಕಾರಿಗಳಿಂದ ಮರೆಮಾಚಿ ತಪ್ಪೆಸಗಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಶಕೀಬ್ ಅಲ್ ಹಸನ್ ಮೇಲೆ ವಿಧಿಸಲಾಗಿರುವ ನಿಷೇಧವು ಮುಂದಿನ ವರ್ಷದ ಅಕ್ಟೋಬರ್‍ 29ರವರೆಗೆ ಚಾಲ್ತಿಯಲ್ಲಿರಲಿದೆ. ಹೀಗಾಗಿ ಶಕೀಬ್ ಮುಂದಿವ ವರ್ಷ ನಡೆಯಲಿರುವ ಟಿ-20 ವಿಶ್ವಕಪ್‌ ಪಂದ್ಯಾವಳಿಯಿಂದಲೂ ಹೊರಗುಳಿಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...