sepoy rahul ಪಾಕ್ ಗುಂಡಿಗೆ ಬೆಳಗಾವಿ ಯೋಧ ರಾಹುಲ್ ಹುತಾತ್ಮ

sepoy rahul
martyred sepoy rahul

sepoy rahul  ಕಾಶ್ಮೀರ ಗಡಿಯಲ್ಲಿ ದೇಶಕ್ಕಾಗಿ ವೀರ ಮರಣ ಹೊಂದಿದ ಯೋಧ

ಹೊಸದಿಲ್ಲಿ: ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ( sepoy rahul  ) ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬೆಳಗಾವಿರ ಯೋಧ ರಾಹುಲ್ ಭೈರು ಸುಲಗೇಕರ ವೀರ ಮರಣ ಅಪ್ಪಿದ್ದಾರೆ.

ಇದನ್ನೂ ಓದಿ: ಅನರ್ಹರ ಸ್ಥಿತಿ ಅತಂತ್ರ, 13ರವರೆಗಿಲ್ಲ ತೀರ್ಪು

ಜಮ್ಮು ಕಾಶ್ಮೀರದ ಮೇಂಧಾರ್‍ ವ್ಯಾಪ್ತಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಪಡೆಗಳು ನಡೆಸಿದ ಗುಂಡಿನ ಕಾಳಗದಲ್ಲಿ ರಾಹುಲ್ ವೀರ ಮರಣ ಅಪ್ಪಿದರು ಎಂದು ಸೇನೆ ಪ್ರಕಟಣೆ ತಿಳಿಸಿದೆ.

ರಾಹುಲ್ ಭೈರು ಸುಲಗೇಕರ್‍ ಅವರು ಬೆಳಗಾವಿ ಜಿಲ್ಲೆಯ ಉಚ್ಗಾಂವದ ನಿವಾಸಿ. ಭಾರತೀಯ ಸೇನೆಯಲ್ಲಿ ಅವರು ಸಿಪಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಜಮ್ಮು ಕಾಶ್ಮೀರವನ್ನು ಕೇಂದ್ರ ಸರಕಾರವು ಇಬ್ಭಾಗ ಮಾಡಿದ ನಂತರ ಪಾಕಿಸ್ತಾನವು ಅದನ್ನು ಜೀರ್ಣಿಸಿಕೊಳ್ಳಲಾಗದೇ ಪರೋಕ್ಷ ಸಮರಕ್ಕೆ ಮುಂದಾಗಿದ್ದು, ಗಡಿಯ ನಾನಾ ಕಡೆ ಆಗಾಗ ಅಪ್ರಚೋದಿತ ದಾಳಿಗಳನ್ನು ಹೆಚ್ಚಿಸಿದೆ.

ಭಾರತೀಯ ಪಡೆಗಳು ಸಹ ಪಾಕಿಸ್ತಾಣದ ವಿನಾಕಾರಣ ದಾಳಿಗಳಿಗೆ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದು, ಪಾಕ್ ಯೋಧರ ಎದೆಯಲ್ಲಿ ನಡುಕ ಹುಟ್ಟಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...