sena cm ಮಹಾರಾಷ್ಟ್ರದಲ್ಲಿನ್ನು ಸೇನೆಯ ಗರ್ಜನೆ, ಉದ್ಧವ್ ಪ್ರತಿಷ್ಠಾಪನೆ

sena cm
uddhav takes oath as maha cm

sena cm ಮುಖ್ಯಮಂತ್ರಿಯಾಗಿ ಉದ್ಧವ್ ಪ್ರಮಾಣ ಸ್ವೀಕಾರ

ಮುಂಬೈ: ಸಾಕಷ್ಟು ರಾಜಕೀಯ ಹೈಡ್ರಾಮಾ ನಂತರ ಕೊನೆಗೂ ( sena cm )  ಮಹಾರಾಷ್ಟ್ರದಲ್ಲಿ ಬಹುಮತದ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಇದೇ ಮೊದಲ ಬಾರಿಗೆ ಠಾಕ್ರೆ ಕುಟುಂಬದ ಕೈಗೆ ಅಧಿಕಾರದ ಗದ್ದುಗೆ ಲಭಿಸಿದ್ದು, ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿನ್ನು ಠಾಕ್ರೆ ಶಾಹಿ

ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕಿನಲ್ಲಿ ಶಿವಸೈನಿಕರ ಉದ್ಘೋಷಗಳ ನಡುವೆ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ನೂತನ ಮುಖಯಮಂತ್ರಿಯಾಗಿ ಗುರುವಾರ ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಎನ್ಸಿಪಿ ಅಧ್ಯಕ್ಷ ಶರದ್ ಪವಾರ್, ರಾಜ್ ಠಾಕ್ರೆ, ಉದ್ಯಮಿ ಮುಕೇಶ್ ಅಂಬಾನಿ ಈ ಸಮಾರಂಭವನ್ನು ಸಾಕ್ಷಾತ್ಕರಿಸಿದರು.

ಉದ್ಧವ್ ಠಾಕ್ರೆ ಜೊತೆ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್‌ನ ಒಟ್ಟು ಆರು ಮಂದಿ ಶಾಸಕರು ಮಂತ್ರಿಗಳಾಗಿ ಅಧಿಕಾರದ ಗೋಪ್ಯತೆ ಮತ್ತು ಪ್ರಮಾಣವಚನ ಸ್ವೀಕರಿಸಿದರು. ಉದ್ಧವ್ ವಿಧಾನಮಂಡಲದ ಸದಸ್ಯರಾಗಿಲ್ಲದ ಕಾರಣ ಮುಂದಿನ ಆರು ತಿಂಗಳಲ್ಲಿ ಅವರು ಯಾವುದಾದರೂ ಒಂದು ಸದನಕ್ಕೆ ಆಯ್ಕೆಯಾಗಬೇಕಿದೆ.

ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಮೈತ್ರಿಕೂಟ ಮಹಾರಾಷ್ಟ್ರ ವಿಕಾಸ್ ಅಗಾಡಿಯ ಶಾಸಕಾಂಗ ನಾಯಕರಾಗಿ ಉದ್ಧವ್ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದರು. ಉದ್ಧವ್ ಶಿವಸೇನಾದ 3ನೇ ಸಿಎಂ ಆಗಿದ್ದು, ಇದಕ್ಕೆ ಮುನ್ನ ಮನೋಹರ್ ಜೋಶಿ ಮತ್ತು ನಾರಾಯಣ ರಾಣೆ ಈ ಹುದ್ದೆ ನಿಭಾಯಿಸಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...