sc verdict ಸುಪ್ರೀಂ ತೀರ್ಪಿನ ತವಕ: ಅನರ್ಹರು ದಿಲ್ಲಿಗೆ ದೌಡು

rebels happy
karnataka rebel leaders

sc verdict ತೀರ್ಪು ವಿಳಂಬಕ್ಕೆ ಅನರ್ಹ ಶಾಸಕರ ತಳಮಳ

ಹೊಸದಿಲ್ಲಿ: ತಮ್ಮ ರಾಜಕೀಯ ಭವಿಷ್ಯ ( sc verdict ) ನಿರ್ಧರಿಸಲಿರುವ ಸುಪ್ರೀಂ ಕೋರ್ಟ್‌ ತೀರ್ಪು ಶುಕ್ರವಾರ ಪ್ರಕಟಗೊಳ್ಳುವ ಸುಳಿವಿನ ಹಿನ್ನೆಲೆಯಲ್ಲಿ ಕೆಲವು ಅನರ್ಹ ಶಾಸಕರು ದಿಲ್ಲಿಗೆ ದೌಡಾಯಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಜೊತೆ ಬಿಜೆಪಿ ದೋಸ್ತಿ ಮಾತು, ಅರ್ನಹರಿಗೆ ಅಜೀರ್ಣ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ತಮ್ಮನ್ನು ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮುಗಿದಿದ್ದು ತೀರ್ಪನ್ನು ಕಾದಿರಿಸಲಾಗಿದೆ.

ಈ ಮಧ್ಯೆ ಶುಕ್ರವಾರ ತೀರ್ಪು ಬರಬಹುದು ಎಂಬ ಊಹಾಪೋಹ ಇದ್ದು, ಕೆಲ ಅನರ್ಹ ಶಾಸಕರು ದಿಲ್ಲಿಗೆ ಹಾರಿರುವುದು ಈ ಊಹಾಪೋಹಕ್ಕೆ ಪುಷ್ಟಿ ನೀಡಿದೆ.

ಉಪಚುನಾವಣಾ ಪ್ರಕ್ರಿಯೆ ಶುರುವಾಗಲು ದಿನಗಳು ಹತ್ತಿರವಾಗುತ್ತಿದ್ದರೂ ತೀರ್ಪು ಬಾರದಿರುವುದು ಅನರ್ಹ ಶಾಸಕರಲ್ಲಿ ತಪನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ನಾಳೆಯೂ ತೀರ್ಪು ಬರದಿದ್ದರೇ ಕೋರ್ಟಿನ ಮೊರೆ ಹೋಗುವಂತೆ ವಕೀಲರಲ್ಲಿ ಅವರು ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದೆಲ್ಲದರ ನಡುವೆ ಆಪರೇಶನ್ ಕಮಲವನ್ನು ರುಜುವಾತು ಪಡಿಸುವ ರೀತಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಸಭೆಯಲ್ಲಿ ಆಡಿರುವ ಮಾತುಗಳ ಟೇಪ್ ಸೃಷ್ಟಿಸಿರುವ ವಿವಾದ ಎಲ್ಲಿ ತಮ್ಮ ಬುಡಕ್ಕೆ ಬರುತ್ತದೊ ಎಂಬ ಆತಂಕ ಅನರ್ಹ ಶಾಸಕರ ಬಣದಲ್ಲಿ ಮೂಡಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...