sc dismisses ನಿರ್ಭಯಾ ಹಂತಕರ ಮನವಿಗೆ ಸುಪ್ರೀಂ ತಿರಸ್ಕಾರ, 22ರಂದು ಗಲ್ಲು ಫಿಕ್ಸ್

sc dismisses
nirbhaya case convicts

sc dismisses 22ರಂದು ಬೆಳಗ್ಗೆ 7ಕ್ಕೆ ನಿರ್ಭಯಾ ಹತ್ಯಾಚಾರಿಗಳು ಗಲ್ಲಿಗೆ

ಹೊಸದಿಲ್ಲಿ: ನಿರ್ಭಯಾ ಹತ್ಯಾಚಾರಿಗಳಿಗೆ ಕಾನೂನು ಮಾರ್ಗಗಳು ಬಹುತೇಕ ( sc dismisses ) ಬಂದಾಗಿದ್ದು ನೇಣಿಗೆ ತಲೆಯೊಡ್ಡುವುದು ಅವರಿಗೆ ಅನಿವಾರ್‍ಯವಾಗಿದೆ. ಗಲ್ಲು ತೀರ್ಪು ಮರು ಪರಿಶೀಲನೆಗೆ ನಿರ್ಭಯಾ ಹತ್ಯಾಚಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟು ತಿರಸ್ಕರಿಸಿದೆ.

ಇದನ್ನೂ ಓದಿ: ಜನಸಾಮಾನ್ಯರ ಉಬ್ಬುಸ ಏರಿಸಿರುವ ಹಣದುಬ್ಬರ

ಹತ್ಯಾಚಾರಿಗಳ ಪೈಕಿ ಇಬ್ಬರು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠವು ತೀರ್ಪು ಪರಿಶೀಲನೆ ಅನಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಮನವಿಯನ್ನು ತಿರಸ್ಕರಿಸಿತು. ಈಗಾಗಲೇ ಹತ್ಯಾಚಾರಿಗಳ ನೇಣಿಗೆ 22ರಂದು ಬೆಳಗ್ಗೆ ಸಮಯ ನಿಗದಿಯಾಗಿದೆ.

ಈ ಘೋರ ರೇಪಿಸ್ಟ್‌ಗಳು ಈಗಲೂ ರಾಷ್ಟ್ರಪತಿಗಳ ಕ್ಷಮೆ ಯಾಚಿಸಬಹುದಾಗಿದೆ. ಆದರೆ ಅಲ್ಲಿ ಸಹ ಅ ವರಿಗೆ ಯಾವುದೇ ಕರುಣೆಯ ಭಿಕ್ಷೆ ಸಿಗುವ ಲಕ್ಷಣಗಳು ಇಲ್ಲದಿರುವ ಕಾರಣ 22ರಂದು ಹತ್ಯಾಚಾರಿಗಳು ಗಲ್ಲಿಗೇರುವುದು ಖಾತ್ರಿಯಾಗಿದೆ.

ಈ ಮಧ್ಯೆ ಹತ್ಯಾಚಾರಿಗಳನ್ನು ಗಲ್ಲಿಗೇರಿಸುವ ನಿಟ್ಟಿನಲ್ಲಿ ತಿಹಾರ್‍ ಜೈಲಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಆಪಾದಿತರನ್ನು ಏಕಾಂತ ಕೋಟಣೆಯಲ್ಲಿರಿಸಲಾಗಿದೆ. ಅಲ್ಲದೇ ಮಣ್ಣಿನ ಮೂಟೆಗಳನ್ನು ಬಳಸಿ ಗಲ್ಲುಗಂಬವನ್ನೂ ಅಣಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...