sawant quits ಮೋದಿ ಸರಕಾರದಿಂದ ಶಿವಸೇನೆ ಹೊರಕ್ಕೆ

sawant quits ಸಚಿವ ಸ್ಥಾನಕ್ಕೆ ಅರವಿಂದ್ ಸಾವಂತ್ ರಾಜೀನಾಮೆ

ಮುಂಬೈ: ಮಹಾರಾಷ್ಟ್ರದಲ್ಲಿ (  sawant quits ) ರಚನೆಯ ಕಸರತ್ತು ತೀರದ ಬೆನ್ನಲ್ಲಿಯೇ nda ಮೈತ್ರಿಕೂಟದಿಂದ ಹೊರಬರಲು ಶಿವಸೇನೆ ನಿರ್ಧರಿಸಿದೆ.

ಮೋದಿ ಸರಕಾರದಲ್ಲಿ ಶಿವಸೇನೆಯ ಏಕೈಕ ಪ್ರತಿನಿಧಿ ಅರವಿಂದ್ ಸಾವಂತ್ ತಮ್ಮ ಮಂತ್ರಿಗಿರಿ ತ್ಯಜಿಸುವುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ತನ್ನ ಸರಕಾರ ರಚಿಸಲು ಎನ್ಸಿಪಿ ಕಾಂಗ್ರೆಸ್ ಬೆಂಬಲ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಶಿವಸೇನೆ ಬಿಜೆಪಿ ಸಖ್ಯ ತೊರೆಯಲು ತೀರ್ಮಾನಿಸಿದೆ.

Nda ಮೈತ್ರಿ ತೊರೆದರೆ ಮಾತ್ರ ಬೆಂಬಲದ ಷರತ್ತನ್ನು ಎನ್ಸಿಪಿಯು ಶಿವಸೇನೆಗೆ ವಿಧಿಸಿತ್ತು. ಅದಕ್ಕೆ ಅನುಗುಣವಾಗಿ ಸೇನೆ ನಡೆದಿರುವ ಹಿನ್ನೆಲೆಯಲ್ಲಿ ಮಹಾ ಸರಕಾರ ರಚನೆ ಸುಸೂತ್ರ ಆಗುವ ಸಾಧ್ಯತೆಗಳು ದಟ್ಟವಾಗಿವೆ.

ಸರಕಾರ ರಚನೆಗೆ ಬಿಜೆಪಿ ಒಲ್ಲೆ ಎಂದ ನಂತರ ರಾಜ್ಯಪಾಲ ಕೋಶಿಯಾರಿ ಅವರು ಶಿವಸೇನೆಗೆ ಅಹ್ವಾನ ನೀಡಿದ್ದಾರೆ. 54 ಸದಸ್ಯ ಬಲದ ಸೇನೆಗೆ ಸರಕಾರ ರಚಿಸಲು ncp ಮತ್ತು ಕಾಂಗ್ರೆಸ್ ಪಕ್ಷಗಳ ಬೆಂಬಲ ಅತ್ಯಗತ್ಯವಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...