savadi assured ಲಕ್ಷ್ಮಣ್ ಸವದಿಗೆ ಪರಿಷತ್ ಸ್ಥಾನ ಫಿಕ್ಸ್, ಶಂಕರ್‌ಗೆ ನಿರಾಸೆ

savadi set

savadi assured ಸವದಿ ಡಿಸಿಎಂ ಸ್ಥಾನ ಅಬಾಧಿತ, ಶಂಕರ್‌ಗೆ ಸದ್ಯಕ್ಕಿಲ್ಲ ಚಾನ್ಸ್

ಬೆಂಗಳೂರು: ಉಪಚುನಾವಣೆಯಲ್ಲಿ ರಿಜ್ವಾನ್ ಅರ್ಶದ್ ವಿಧಾನಸಭೆಗೆ ( savadi assured ) ಆಯ್ಕೆಯಾಗುವ ಮೂಲಕ ಖಾಲಿಯಾಗಿರುವ ವಿಧಾನಪರಿಷತ್ ಸ್ಥಾನ ಡಿಸಿಎಂ ಲಕ್ಷ್ಮಣ್ ಸವದಿ ಪಾಲಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಸವದಿ ಪಾಳೆಯದಲ್ಲಿ ಮನೆಮಾಡಿದ್ದ ಆತಂಕ ದೂರಾಗಿದೆ.

ಇದನ್ನೂ ಓದಿ: ಗುಂಪು ಕಟ್ಟಿಕೊಂಡು ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ: ಡಿಕೆಶಿ

ಫೇಬ್ರುವರಿ 20ರೊಳಗೆ ವಿಧಾನ ಮಂಡಲದ ಯಾವುದಾದರೊಂದು ಸದನದ ಸದಸ್ಯರಾಗದಿದ್ದರೇ ಡಿಸಿಎಂಗಿರಿ ಕಳೆದುಕೊಳ್ಳುವ ಭೀತಿ ಸವದಿ ಅವರಿಗೆ ಎದುರಾಗಿತ್ತು. ಆದರೆ ಯಾವುದೇ ಕಾರಣಕ್ಕೂ ಸವದಿ ಅವರಿಗೆ ಪರಿಷತ್ ಟಿಕೆಟ್ ತಪ್ಪಸಲು ಸಾಧ್ಯವಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರಿಗೆ ಕೊಂಚ ನಿರಾಳವಾಗಿದೆ.

ಇದೇ ವೇಳೆ ಮಂತ್ರಿ, ಶಾಸಕ ಸ್ಥಾನ ಕಳೆದುಕೊಂಡು ಉಪ ಚುನಾವಣೆಯಲ್ಲಿ ಟಿಕೆಟ್ಟೂ ಸಿಗದೆ ಪರಿತಪಿಸಿದ್ದ ಆರ್‍. ಶಂಕರ್ ಅವರಿಗೆ ವಿಧಾನ ಪರಿಷತ್ ಪ್ರವೇಶದ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೀಡಿದ್ದ ಭರವಸೆ ಸದ್ಯದ ಮಟ್ಟಿಗೆ ಹುಸಿಯಾಗಿದೆ.

ಇನ್ನಾರು ತಿಂಗಳಲ್ಲಿ ಪರಿಷತ್ತಿನಲ್ಲಿ ಕೆಲವು ಸ್ಥಾನಗಳು ಖಾಲಿಯಾಗಲಿದ್ದ, ಅಲ್ಲಿಯವರೆಗೆ ಕಾಯುವುದು ಅನಿವಾರ್ಯ ಎಂಬ ಪರಿಸ್ಥಿತಿ  ಶಂಕರ್ ಅವರಿಗೆ ಎದುರಾಗಿದೆ. ಇನ್ನು ಅವರಿಗೆ ಮಂತ್ರಿಭಾಗ್ಯ ದೊರಕುವ ಸಾಧ್ಯತೆಗಳೂ ಕ್ಷೀಣಿಸಿದ್ದು ಸದ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ.