ಅಹಮದಾಬಾದ್: ಸರ್ದಾರ್ ಸರೋವರ್ ಅಣೆಕಟ್ಟೆ ದೇಶಕ್ಕೆ ಸಮರ್ಪಣೆ ಆಗಿದೆ. ತಮ್ಮ ೬೭ನೇ ಜನ್ಮದಿನದ ಸಂದರ್ಭ ಪ್ರಧಾನಿ ಮೋದಿ ಭಾನುವಾರ ಈ ಭವ್ಯ ಅಣೆಕಟ್ಟೆಯನ್ನು ದೇಶಕ್ಕೆ ಸಮರ್ಪಿಸಿದ್ದಾರೆ.
4.73 ದಶಲಕ್ಷ ಎಕರೆ ಅಡಿ (ಎಂ.ಎಫ್.ಎ) ಬಳಕೆಗೆ ಅರ್ಹವಾದ ಜಲ ಸಂಗ್ರಹಣೆಗಾಗಿ ಈ ಅಣೆಕಟ್ಟೆಯ ಎತ್ತರವನ್ನು ಇತ್ತೀಚೆಗೆ 138.68 ಅಡಿಗಳಿಗೆ ಎತ್ತರಿಸಲಾಗಿತ್ತು. ಇದರಿಂದ ಗುಜರಾತ್, ರಾಜಾಸ್ಥಾನ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದ ರೈತರಿಗೆ ಲಾಭವಾಗಲಿದೆ.
ಯೋಜನೆಯು ನರ್ಮದಾ ನದಿಯ ನೀರನ್ನು ಗುಜರಾತ್ ರಾಜ್ಯದ ನೀರಿನ ಕೊರತೆ ಇರುವ ಪ್ರದೇಶಗಳಿಗೆ ವಿಸ್ತೃತ ಕಾಲುವೆ ಮತ್ತು ಕೊಳವೆ ಜಾಲದ ಮೂಲಕ ಹರಿಸಲು ನೆರವಾಗುತ್ತದೆ. ಯೋಜನೆಯಿಂದ 10 ಲಕ್ಷ ರೈತರಿಗೆ ನೀರಾವರಿ ಸೌಲಭ್ಯ ದೊರಕಲಿದೆ ಮತ್ತು ವಿವಿಧ ನಗರ ಮತ್ತು ಪಟ್ಟಣಗಳ 4 ಕೋಟಿಯಷ್ಟು ಜನರಿಗೆ ಕುಡಿಯುವ ನೀರಿನ ಸೌಲಭ್ಯವೂ ದೊರಕುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...