sanjay ಯಶ್ ಕೆಜಿಎಫ್-2ನಲ್ಲಿ ಅಧೀರನಾಗಿ ಸಂಜಯ್ ದತ್?

sanjay
yash, adheera and sanjay dutt

sanjay  29ಕ್ಕೆ ಎರಡನೇ ಪೋಸ್ಟರ್ ಬಿಡುಗಡೆ, ಕುತೂಹಲಕ್ಕೆ ತೆರೆ

ಬೆಂಗಳೂರು: ಕನ್ನಡ ಚಿತ್ರರಂಗದ ಹರಿವನ್ನೇ ಬದಲಿಸಿದ ಇತ್ ಕೆಜಿಎಫ್ ( sanjay  ) ಚಿತ್ರದ ಎರಡನೇ ಅವತರಣಿಕೆ ದಿನೇದಿನೆ ಕುತೂಹಲ ಕೆರಳಿಸುತ್ತಲೇ ಸಾಗಿದೆ.

ಇದನ್ನೂ ಓದಿ: ‘ಕೆಜಿಎಫ್-2’ನಲ್ಲಿ ರಣಭಯಂಕರನಾಗಿ ಕಾಣಿಸಿಕೊಳ್ಳಲಿರುವ ’ಯಶ್‌’

ಶುಕ್ರವಾರ ಅಚ್ಚರಿ ನಿಡುವುದಾಗಿ ಹೇಳಿದ್ದ ಕೆಜಿಎಫ್ ಚಾಪ್ಟರ್‍ 2 ಚಿತ್ರತಂಡ ಅಧೀರ ಪಾತ್ರಧಾರಿಯ ಹೊಸ ಪೋಸ್ಟರ್‍ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಪಾತ್ರಧಾರಿಯ ಮುಖ ಕಾಣುತ್ತಿಲ್ಲ. ಇದಕ್ಕೆ 29ರಂದು ಉತ್ತರ ನೀಡುವುದಾಗಿ ಚಿತ್ರತಂಡ ಹೇಳಿದೆ.

ಈ ಚಿತ್ರದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ನಟ ಸಂಜಯ್ ದತ್ ನಟಿಸಲಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿದ್ದು ಅವರೇ ಅಧೀರನ ಪಾತ್ರ ಮಾಡಲಿದ್ದಾರೆಯೇ ಎಂಬ ಕುತೂಹಲ ಈಗ ಗರಿಗೆದರಿದೆ.

ಅಂದ ಹಾಗೆ ಜುಲೈ 29 ಕ್ಕೆ ಸಂಜಯ್ ದತ್ ಹುಟ್ಟುಹಬ್ಬ. ಹಾಗಾಗಿ ಅದೇ ದಿನವೇ ಕೆಜಿಎಫ್ 2 ಈ ರೋಚಕ ಸುದ್ದಿಯನ್ನು ರಿವೀಲ್ ಮಾಡಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.

ಈ ಮಧ್ಯೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಸೆಪ್ಟೆಂಬರ್‍ ವೇಳೆಗೆ ಬಹುತೇಕ ಪೂರ್ಣಗೊಳ್ಳುವ ವಿಶ್ವಾಸವನ್ನು ಚಿತ್ರತಮೆ ಹೊಂದಿದೆ. ಕೆಜಿಎಫ್ ಮೊದಲ ಭಾಗ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿ 200 ಕೋಟಿಗೂ ಹೆಚ್ಚು ರೂ ಗಳಿಕೆ ಕಂಡಿದ್ದನ್ನು ನೆನಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...