salman kurshid ಕಾಂಗ್ರೆಸ್ ಕಳೆದುಹೋಗುತ್ತಿದೆ, ದಾರಿ ಕಾಣದಾಗಿದೆ: ಸಲ್ಮಾನ್ ಖುರ್ಶಿದ್ ಅಳಲು

salman kurshid
former minister salman kurshid

salman kurshid ನಾಯಕನಿಲ್ಲದೇ ಕಾಂಗ್ರೆಸ್ ಸೊರಗುತ್ತಿದೆ ಎಂದ ಮಾಜಿ ಕೇಂದ್ರ ಸಚಿವ ಸಲ್ಮಾನ್

ಹೊಸದಿಲ್ಲಿ: ಲೋಕಸಭೆಯ ಸೋಲಿನ ಬೆನ್ನಲ್ಲಿಯೇ ನಾಯಕ ಪಕ್ಷಕ್ಕೆ ( salman kurshid ) ಬೆನ್ನು ತೋರಿದ ಪರಿಣಾಮ ಕಾಂಗ್ರೆಸ್ ಕಳೆದುಹೋಗುವ ಅಪಾಯದಲ್ಲಿದೆಯಲ್ಲದೇ ಮುಂದೆ ದಾರಿ ಕಾಣದಂತಾಗಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಮುಖಂಡ ಸಲ್ಮಾನ್ ಖುರ್ಶಿದ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶಕ್ಕೆ ಪ್ರಿಯಾಂಕಾ ಶಿಫ್ಟ್?

ಲೋಕಸಭಾ ಚುನಾವಣೆಯ ಸೋಲಿನ ಹೊಡೆತದಿಂದ ಪಕ್ಷ ಇನ್ನೂ ಚೇತರಿಸಿಕೊಂಡಿಲ್ಲ. ಈ ವೇಳೆಗ ಸೋಲಿನ ಪರಾಮರ್ಶೆ ನಡೆದು ಹೊಸ ಹೋರಾಟ ರೂಪುರೇಷೆ ಸಿದ್ಧಗೊಳ್ಳಬೇಕಿತ್ತ. ಆದರೆ ಹಾಗಾಗಿಲ್ಲ. ಇದಕ್ಕೆ ಕಾರಣ ಸೋಲಿನ ನಾಯಕ ರಣಾಂಗಣದಿಂದ ಹೊರನಡೆದದ್ದೇ ಆಗಿದೆ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆ ತ್ಯಜಿಸಿದ ನಂತರ ಅನೇಕರು ಪಕ್ಷ ತೊರೆಯುತ್ತಿದ್ದಾರೆ. ರಾಹುಲ್ ಹಾಗೆ ಮಾಡಬಾರದಿತ್ತು. ಈಗಲು ಕಾಂಗ್ರೆಸಿಗರ ನಿಷ್ಠೆ ರಾಹುಲ್ ಪರವಾಗಿದೆ ಎಂದು ಯಪಿಎ ಸರಕಾರದ ಪ್ರಮುಖ ಸಚಿವರಲ್ಲಿ ಒಬ್ಬರಾಗಿದ್ದ ಸಲ್ಮಾನ್ ಖುರ್ಶಿದ್ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ನಾಯಕತ್ವ ತ್ಯಾಗದ ಹಠಕ್ಕೆ ಬಿದ್ದ ಕಾರಣ ಸೋನಿಯಾ ಗಾಂಧಿ ಅಧ್ಯಕ್ಷ ಹುದ್ದೆ ನಿಭಾಯಿಸುತ್ತಿದ್ದಾರಾದರೂ ಅವರ ಕಾರ್‍ಯವೈಖರಿ ತಾತ್ಕಾಲಿಕ ಅಧ್ಯಕ್ಷರ ರೀತಿಯಲ್ಲಿಯೇ ಇದೆಯೇ ಹೊರತು ಪೂರ್ಣಾವಧಿ ಅಧ್ಯಕ್ಷರಂತಿಲ್ಲ ಎಂದು ಸಲ್ಮನಾ ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಮತ್ತು ಹರ್‍ಯಾಣ ರಾಜ್ಯಗಳಲ್ಲಿ ಚುನಾವಣೆ ಎದುರಾಗಿದೆ. ಪಕ್ಷ ಈಗಿರುವ ಸ್ಥಿತಿಯಲ್ಲಿ ಈ ಎರಡೂ ರಾಜ್ಯಗಳಲ್ಲಿ ಸೋಲುವುದ ನಿಶ್ಚಿತ ಎಂದು ಸಲ್ಮಾನ್ ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...