sadhvi out ಗೋಡ್ಸೆ ಗುಣಗಾನ: ಸಂಸದೀಯ ಸಮಿತಿಯಿಂದ ಸಾಧ್ವಿ ಪ್ರಗ್ಯಾ ಕಿಕೌಟ್

sadhvi out
sadhvi pragya

sadhvi out ರಕ್ಷಣಾ ಸಮಿತಿಯಿಂದ ಸಾಧ್ವಿ ಪ್ರಗ್ಯಾ ಕೈಬಿಟ್ಟ ಬಿಜೆಪಿ

ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಂತಕ ( sadhvi out ) ನಾಥುರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳಿ ತೀವ್ರ ವಿವಾದಕ್ಕೆ ಆಸ್ಪದ ನೀಡಿದ ಭೋಪಾಲದ ಸಂಸದೆ ಸಾಧ್‌ಇ ಪ್ರಗ್ಯಾ ಸಿಂಗ್ ಅದಕ್ಕಾಗಿ ತಕ್ಕ ಪ್ರತಿಫಲ ಪಡೆಯುವಂತಾಗಿದೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ಹಂತಕನನ್ನು ದೇಶಭಕ್ತ ಎಂದ ಸಂಸದೆ ಸಾಧ್ವಿ

ಸಾಧ್ವಿಯ ಸಲ್ಲದ ನುಡಿಗಳು ಸೃಷ್ಟಿಸಿರುವ ವಿವಾದ ಕೈಮೀರಿ ಹೋಗದಂತೆ ಎಚ್ಚರಿಕೆ ವಹಿಸಿದ ಭಾರತೀಯ ಜನತಾ ಪಕ್ಷವೂ ರಕ್ಷಣಾ ವ್ಯವಹಾರ ಕುರಿತಾದ ಸಂಸದೀಯ ಸಮಿತಿ ಸದಸ್ಯತ್ವದಿಂದ ಸಾಧ್ವಿ ಪ್ರಗ್ಯಾ ಅವರನ್ನು ಕೈಬಿಟ್ಟಿದೆ. ಕೆಲ ದಿನಗಳ ಹಿಂದಷ್ಟೇ ಅವವರನ್ನು ಈ ಸಮಿತಿಗೆ ನೇಮಕ ಮಾಡಲಾಗಿತ್ತು.

ಈ ಮಧ್ಯೆ ಗಾಂಧೀಜಿ ಅವರ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದೆ. ಅಂತಹ ದಾರ್ಶನಿಕನನ್ನು ಕೊಲೆ ಮಾಡಿದ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿದರು.

ಲೋಕಸಭೆಯಲ್ಲಿ ಎಸ್ಪಿಜಿ ಭದ್ರತಾ ತಿದ್ದುಪಡಿ ಮಸೂದೆ ವೇಳೆ ಬುಧವಾರ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಭೋಪಾಲ ಸಂಸದೆ ಸಾಧ್ವಿ ಪ್ರಗ್ಯಾ ಗೋಡ್ಸೆ ಹೆಸರು ಹೇಳದೆ ದೇಶಭಕ್ತರ ಉದಾಹರಣೆ ಬೇಡ ಎಂದಾಗ ಪ್ರತಿಪಕ್ಷಗಳು ಅವರ ವಿರುದ್ಧ ಹರಿಹಾಯ್ದಿದ್ದವು.

ಆಡಳಿತ ಪಕ್ಷದ ಸದಸ್ಯರು ಸಾಧ್ವಿ ಅವರನ್ನು ಸುಮ್ಮನೆ ಕೂರುವಂತೆ ಪುಸಲಾಯಿಸುತ್ತಿದ್ದಂತೆಯೇ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಬಂಧಿತ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...