ಶ್ರೀಲಂಕಾದ ಮಹಿಳೆಯಿಂದ sabarimala ಅಯ್ಯಪ್ಪ ದರ್ಶನ

ಶಬರಿಮಲೆ: ಬಿಜೆಪಿ ಮತ್ತು ಅಯ್ಯಪ್ಪ ಭಕ್ತರ ಉಗ್ರ ಪ್ರತಿಭಟನೆಯ ನಡುವೆಯೇ ಶ್ರೀಲಂಕಾದ ಮಹಿಳೆಯೊಬ್ಬರು ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ದಿನಗಳ ಹಿಂದೆ ಪೊಲೀಸರ ಸರ್ಪಗಾವಲಿನಲ್ಲಿ ಇಬ್ಬರು ಐವತ್ತರ ಪ್ರಾಯ ದಾಟದ ಇಬ್ಬರು ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದಿದ್ದರು.

ಇದನ್ನು ವಿರೋಧಿಸಿ ಹುಂದೂಪರ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೇ ಶ್ರೀಲಂಕಾದಿಂದ ಆಗಮಿಸಿ ಅಯ್ಯಪ್ಪ ಭಕ್ತೆ ದೇವರ ದರ್ಶನ ಪಡೆಯುವಲ್ಲಿ ಯಶಸ್ವಿಯಾದರು.

ಇರುಮುಡಿ ಹೊತ್ತು ಆಗಮಿಸಿದ ಮಿಳೆಗೆ ಪಡಿಮೆಟ್ಟಿಲು ಹತ್ತಲು ಅವಕಾಶ ನೀಡದೆ ಅಲ್ಲಿದ್ದ ಪ್ರತಿಭಟನಾಕಾರರು ತಡೆದರು. ಧೃತಿಗೆಡದ ಮಹಿಳೆ ರಾತ್ರಿ ಸುಮಾರಿಗೆ ದೇವರ ದರ್ಶನ ಪಡೆದರು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಅಯ್ಯಪ್ಪನ ದರುಶನ ಪಡೆದ ಇಬ್ಬರು ಮಹಿಳೆಯರು

46 ವರ್ಷದ ಮಹಿಳೆ 9.30ರ ಸುಮಾರಿಗೆ ಶಶಿಕಲಾ ಎಂಬ ಈ ಮಹಿಳೆ ದರ್ಶನ ಮಾಡಿದ್ದಾರೆ. ಪೊಲೀಸ್​ ಬಿಗಿ ಭದ್ರತೆಯಲ್ಲಿ ಅವರು ಶಬರಿಮಲೆಗೆ ಬಂದಿದ್ದರು. 41 ದಿನಗಳ ವ್ರತಾಚರಣೆಯನ್ನು ಅವರು ನಡೆಸಿದ್ದರು ಎನ್ನಲಾಗಿದೆ.

ತನಗೆ ದರ್ಶನ ಮಾಡಲು ಅವಕಾಶ ನಿರಾಕರಿಸಲಾಯಿತು ಎಂದು ಶಶಿಕಲಾ ಹೇಳಿಕೊಂಡರೂ ಆಕೆ ದೇವರ ದರ್ಶನ ಪಡೆದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇತರ ಎಲ್ಲ ಭಕ್ತರಂತೆ ತಾನೂ ಸಹ ಮಡಿ ಸೇರಿದಂತೆ ಎಲ್ಲ ವ್ರತಾಚರಣೆ ಕೈಗೊಂಡಿದ್ದಾಗಿ ಶಶಿಕಲಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...