sabarimala income ಶಬರಿಮಲೆ ಅಯ್ಯಪ್ಪನಿಗೆ ಈ ಬಾರಿ ಬಂಪರ್ ಆದಾಯ

sabarimala income
sabarimala ayyappa temple

sabarimala income ಭಕ್ತರ ಸಂಖ್ಯೆ ಜೊತೆಗೆ ಶಬರಿಮಲೆ ಆದಾಯದಲ್ಲೂ ಭಾರೀ ಹೆಚ್ಚಳ

ತಿರುವನಂತಪುರ: ಕಳೆದ ಬಾರಿ ಮಹಿಳೆಯರ ಪ್ರವೇಶ ವಿಚಾರವಾಗಿ ಸಾಕಷ್ಟು ( sabarimala income) ವಿವಾದ ಸೃಷ್ಟಿಯಾಗಿ ಕಳೆಗುಂದಿದ್ದ ಶಬರಿಮಲೆ ಅಯ್ಯಪ್ಪ ದರ್ಶನಾರ್ಥಿಗಳ ಸಂಖ್ಯೆ ಈ ಬಾರಿ ಜೋರು ಪಡೆದಿದ್ದು ಅದರಂತೆಯೇ ದೇವಳದ ಆದಾಯದಲ್ಲಿಯೂ ಭಾರೀ ಹೆಚ್ಚಳ ಉಂಟಾಗಿದೆ.

ಇದನ್ನೂ ಓದಿ: ಏಸು ಪ್ರತಿಮೆ: ಅಲ್ಪರಿಂದ ಪಾಠ ಕಲಿಯಬೇಕಿಲ್ಲ, ಬಿಜೆಪಿ ನಾಯಕರಿಗೆ…

ಶಬರಿಮಲೆ ಅಯ್ಯಪ್ಪನ ವಾರ್ಷಿಕ ದರ್ಶನದ ಮೊದಲಾರ್ಧ ಮುಗಿದಿದ್ದು, ಈಗಾಗಲೇ ದೇವರ ದರ್ಶನ ಪಡೆದ ಭಕ್ತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ದಾಖಲಾಗಿದೆ. ಇದೇ ರೀತಿ ಹುಂಡಿಯೂ ಸೇರಿದಂತೆ ವಿವಿಧ ಚಟುವಟಿಕೆಗಳಿಂದ ದೇವಾಲಯಕ್ಕೆ ಸಂಗ್ರಹವಾಗುವ ಆದಾಯದಲ್ಲಿಯೂ ಭಾರೀ ಹೆಚ್ಚಳ ಉಂಟಾಗಿದೆ.

ಜನವರಿ ಒಂದರ ನಂತರ ಮತ್ತೆ ದೇಗುಲದಲ್ಲಿ ದರ್ಶನ ಆರಂಭವಾಗಲಿದ್ದು, ಈವರೆಗೆ ಅಂದರೆ ಕಳೆದ 45 ದಿನಗಳಲ್ಲಿ ದೇವಾಲಯದ ಆದಾಯ 150 ಕೋಟಿ ರೂ ದಾಟಿದೆ ಎಂಬ ವರದಿಗಳಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇವಾಲಯಕ್ಕೆ 100 ಕೋಟಿ ರೂ ಆದಾಯ ಸಂಗ್ರಹವಾಗಿತ್ತು.

ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಕೇರಳ ಸರಕಾರವು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇ ಅಲ್ಲದೇ ಮಹಿಳೆಯರಿಗೆ ಯಾವುದೇ ವಿಶೇಷ ರಕ್ಷಣೆ, ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಜೊತೆಗೆ ತನ್ನ ತೀರ್ಪಿನ ಪರಾಮರ್ಶೆಗೆ ಸುಪ್ರೀಂ ಕೋರ್ಟು ಒಪ್ಪಿರುವ ಹಿನ್ನೆಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರು ಮುಂದಾಗುತ್ತಿಲ್ಲ. ಇನ್ನು ಯಾವುದೇ ಬಾಧೆ ಇಲ್ಲದೆ, ಅಡೆ-ತಡೆ ಇಲ್ಲದ ನೆಚ್ಚನ ದೇವರ ದರ್ಶನ ಸಾಧ್ಯ ಎಂದು ತಿಳಿದ ಭಕ್ತಗಣ ಸಾವಿರೋಪಾದಿಯಲ್ಲಿ ಈ ಪವಿತ್ರ ಯಾತ್ರೆಗೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...