rti ಸುಪ್ರೀಂ ಕೋರ್ಟಿನ ಮಹತ್ವದ ಆದೇಶ
ಹೊಸದಿಲ್ಲಿ: ಮುಖ್ಯ ನ್ಯಾಯಮೂರ್ತಿಗಳು ಸಹ ಮಾಹಿತಿ ಹಕ್ಕು ( rti ) ಕಾಯಿದೆಗೆ ಒಳಪಡುತ್ತಾರೆ ಎಂಉ ಸುಪ್ರೀಂ ಕೋರ್ಟು ಮಹತ್ವದ ತೀಪು ನೀಡಿದೆ. ಈ ಸಂಬಮಧ ದಿಲ್ಲಿ ಹೈಕೋಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟು ಬುಧವಾರ ಎತ್ತಿಹಿಡಿಯಿತು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ
ಮುಖ್ಯ ನ್ಯಾಯಮೂರ್ತಿಗಳ ಕಚೇರಿಯ ಮಾಹಿತಿ ಪಾರದರ್ಶಕತೆ ಕಾಯಿದೆ ವ್ಯಾಪ್ತಿಗೆ ಒಳಪಟ್ಟಿದ್ದು ಸಾರ್ವಜನಿಕರಿಗೆ ಮಾಹಿತಿ ಹಕ್ಕಿನಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರಿದ್ದ ಪೀಠ ಮಹತ್ವದ ಆದೇಶ ನೀಡಿದೆ.
ಆರ್ಟಿಐ ಕಾರ್ಯಕರ್ತ ಸುಭಾಷ್ಚಂದ್ರ ಅಗರ್ವಾಲ್ ಪರ ವಾದ ಮಂಡಿಸಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್, ಸಿಜೆಐ ಕಚೇರಿ ಮತ್ತು ಸುಪ್ರೀಂಕೋರ್ಟ್ನ ಕೊಲಿಜಿಯಂ ಅನ್ನು ಆರ್ಟಿಐ ವ್ಯಾಪ್ತಿಯಡಿ ತರಬೇಕು ಎಂದು ಪ್ರತಿಪಾದಿಸಿದರು.
ಸುಪ್ರೀಂ ಕೋರ್ಟಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಸಿಜೆಐ ಅಧಿಕಾರದಡಿ ಬರುವ ಕೊಲಿಜಿಯಂನ ಕಾರ್ಯ ಚಟುವಟಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗದಿಂದ ನ್ಯಾಯಾಂಗದ ಸ್ವಾತಂತ್ರ ಹಾಳಾಗುತ್ತದೆ ಎಂದು ವಾದಿಸಿದ್ದರು.