robert look ದೇಶಾದ್ಯಂತ ಟ್ರೆಂಡ್ ಸೃಷ್ಟಿಸಿದ ದರ್ಶನ್ ರಾಬರ್ಟ್‌ ಲುಕ್

robert look

robert look  ಟ್ವಿಟರ್, ಯೂಟ್ಯೂಬ್‌ಗಳಲ್ಲಿ ಧೂಳೆಬ್ಬಿಸಿದ ರಾಬರ್ಟ್‌ ಮೋಷನ್ ಪೋಸ್ಟರ್

ಬೆಂಗಳುರು: ಯಶಸ್ಸಿನ ಅಲೆಯ ಮೇಲೆ ಭರ್ಜರಿ ಪ್ರಯಾಣ ಮಾಡುತ್ತಿರುವ ( robert look  ) ಡಿ ಬಾಸ್ ದರ್ಶನ್ ಅವರ ಬಹು ನಿರೀಕ್ಷಿತ ಮುಂದಿನ ಚಿತ್ರ ರಾಬರ್ಟ್‌‌ನ ಫಸ್ಟ್ ಲುಕ್ ಮೋಷನ್ ಪೋಸ್ಟರ್‍ ಬಿಡುಗಡೆಯಾಗಿದ್ದು, ದೇಶಾದ್ಯಂತ ಟ್ರೆಂಡ್ ಸೃಷ್ಟಿಸಿದೆ.

ಇದನ್ನೂ ಓದಿ: ಹೀಗಿದೆ ನೋಡಿ ಯಶ್ ಕೆಜಿಎಫ್ ಚಾಪ್ಟರ್ 2 ಮೊದಲ ಲುಕ್

ದಶಣ್ ಅಭಿನಯದ ಅದ್ಧೂರಿ ಚಿತ್ರ ರಾಬರ್ಟ್‌‌ನ ಮೊದಲ ನೋಟವನ್ನು ಸೆರೆ ಹಿಡಿಯುವ ಮೋಷನ್ ಪೋಸ್ಟರ್‌ ಅನ್ನು ಕ್ರಿಸ್‌ಮಸ್ ದಿನದಂದು ಚಿತ್ರ ತಂಡ ಬಿಡುಗಡೆ ಮಾಡಿದ್ದು ಅಭಿಮಾನಿಗಳನ್ನು ಪುಳಕದ ಪರಾಕಾಷ್ಠೆಗೆ ಕೊಂಡೊಯ್ದಿದೆ.

ಮೋಷನ್ ಪೋಸ್ಟರ್‍ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬಿನಲ್ಲಿ ಅಸಂಖ್ಯ ಅಭಿಮಾನಿಗಳನ್ನು ಅದನ್ನು ಕಣ್ತುಂಬಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮತ್ತು ಶೇರ್‍ ಮಾಡಿದರೆ, ಟ್ವಿಟರ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ #robertfirstlook ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು.

ತರುಣ್ ಕಿಶೋರ್ ನಿರ್ದೇಶನದ ರಾಬರ್ಟ್ ಚಿತ್ರದ ಲೆಟೆಸ್ಟ್ ಲುಕ್ ನಲ್ಲಿ ವಿಶೇಷ ಹೇರ್ ಸ್ಟೈಲ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...