risat 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕೊಂಡೊಯ್ದ ರಿಸ್ಯಾಟ್

risat

risat ಇಸ್ರೋದ ಯಶಸ್ಸಿನ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು

ಶ್ರೀಹರಿಕೋಟ: ಭಾರತದ ಇಮೇಂಜಿಂಗ್ ಉಪಗ್ರಹ ಸೇರಿದಂತೆ ಒಟ್ಟು ( risat ) 10 ಉಪಗ್ರಹಗಳನ್ನು ಗೊತ್ತ ಇಸ್ರೋದ ಬಾಹ್ಯಾಕಾಶ ಉಡ್ಡಾವಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ ನಿಗದಿತ ಸಮಯಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ವಿರುದ್ಧ ಹೊತ್ತಿ ಉರಿಯುತ್ತಿರುವ ಈಶಾನ್ಯ ಭಾರತ

ಭೂಮಿಯ ವೀಕ್ಷಣೆ ಮತ್ತು ಇಮೇಜಿಂಗ್ ಉಪಗ್ರಹ ರೀಸ್ಯಾಟ್-2ಬಿಆರ್​1 ಹಾಗೂ ಇತರ ಒಂಬತ್ತು ವಿದೇಶಿ ಉಪಗ್ರಹಗಳನ್ನು ಹೊತ್ತು ಇಸ್ರೋ ನಿರ್ಮಿತ ಪಿಎಸ್​ಎಲ್​ವಿ-ಸಿ48 ರಾಕೆಟ್​ ಯಾವುದೇ ಅಡೆ ತಡೆ ಇಲ್ಲದೇ ಉಡಾವಣೆಗೊಂಡಿತು.

ಭೂಮಿಯಿಂದ 576 ಕಿ.ಮೀ. ಎತ್ತರದಲ್ಲಿರುವ ಕಕ್ಷೆಗೆ ಈ ಉಪಗ್ರಹ ಸೇರ್ಪಡೆಯಾಗಲಿದ್ದು, ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆ ಕಾರ್ಯಗಳಲ್ಲಿ ನೆರವಾಗಲಿದೆ. ಇದಲ್ಲದೇ ಇಸ್ರೇಲ್​, ಇಟಲಿ, ಜಪಾನ್​ ಮತ್ತು ಅಮೇರಿಕದ 6 ಉಪಗ್ರಗಳನ್ನು ಈ ರಾಕೆಟ್​ ಉಡಾವಣೆ ಮಾಡಿದೆ.

ಪಿಎಸ್‌ಎಲ್‌ವಿ ರಾಕೆಟ್‌ ಸರಣಿಯ 50ನೇ ರಾಕೆಟ್‌ ಇದಾಗಿದೆ. ಇನ್ನು ಸತೀಶ್‌ ಧವನ್‌ ಕೇಂದ್ರದಿಂದ ಉಡಾವಣೆಯಾದ 75ನೇ ಉಪಗ್ರಹ ಎಂಬುದು ಮತ್ತೊಂದು ಗಮನಾರ್ಹ ವಿಚಾರವಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...