rememberance ಕೃಷ್ಣೈಕ್ಯ ಶ್ರೀ ವಿಶ್ವೇಶತೀರ್ಥರಿಗೆ ಮುಸ್ಲಿಂ ಬಾಂಧವರ ಗೌರವಾರ್ಪಣೆ

rememberance

rememberance ಪೇಜಾವರ ಮಠದಲ್ಲಿ ಹಿರಿಯ ಶ್ರೀಗಳಿಗೆ ಗೌರವ ಅರ್ಪಿಸಿದ ಮುಸ್ಲಿಂ ಬಾಂಧವರು

ಉಡುಪಿ: ಇತ್ತೀಚೆಗಷ್ಟೇ ಶ್ರೀಕೃಷ್ಣನಲ್ಲಿ ಲೀನರಾದ ಪೇಜಾವರ ಮಠದ ಹಿರಿಯ ( rememberance ) ಸ್ವಾಮಿಗಳಾದ ಶ್ರೀ ವಿಶ್ವೇಶ ತೀರ್ಥರಿಗೆ ಸ್ಥಳೀಯ ಮುಸ್ಲಿಂ ಬಾಂಧವರು ಮಕರ ಸಂಕ್ರಾಂತಿಯ ಪ್ರಯುಕ್ತ ಪೇಜಾವರ ಮಠದಲ್ಲಿ ಗೌರವಾರ್ಪಣೆ ಸಲ್ಲಿಸಿದರು.

ಇದನ್ನೂ ಓದಿ: 100 ಕೋಟಿ ಆದಾಯ: ಕುಕ್ಕೆ ಸುಬ್ರಹ್ಮಣ್ಯನೇ ರಾಜ್ಯದ ಶ್ರೀಮಂತ ದೇವರು

ಸದ್ಯ ಪೇಜಾವರ ಮಠಾಧೀಶರಾಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ಮಂಗಳವಾರ ಭೇಟಿ ಮಾಡಿದ ಸ್ಥಳೀಯ ಮುಸ್ಲಿಂ ಬಾಂಧವರು ಹಿರಿಯ ಸ್ವಾಮೀಜಿ ಶ್ರೀ ವಿಶ್ವೇಶ ತೀರ್ಥರಿಗೆ ಗೌರವ ಸಮರ್ಪಿಸಿದರು. ಹಿರಿಯ ಸ್ವಾಮಿಗಳ ಸರ್ವಧರ್ಮ ಸಮಭಾವದ ಮನೋಭಾವನೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಈ ಮಧ್ಯೆ ಪರ್ಯಾಯ ಶ್ರೀಗಳಾದ ಫಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಮಂಗಳವಾರ ಸಂಕ್ರಾಂತಿ ಪ್ರಯುಕ್ತ ಬ್ರಹ್ಮರಥ ಸಹಿತ ಮೂರು ತೇರುಗಳ ಉತ್ಸವ ವಿಜೃಂಭಣೆಯಿಂದ ಕೈಗೂಡಿತು.

ಕೃಷ್ಣಾಪುರ, ಅದಮಾರು, ಪೇಜಾವರ, ಕಾಣಿಯೂರು, ಸೋದೆ, ಪಲಿಮಾರು ಕಿರಿಯ ಸ್ವಾಮೀಜಿಯವರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. 3 ರಥಗಳಲ್ಲಿ ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ಉತ್ಸವ ಮೂರ್ತಿಗಳನ್ನು ಪೂಜಿಸಿ ಉತ್ಸವವನ್ನು ಭರ್ಜರಿಯಾಗಿ ನಡೆಸಲಾಯಿತು.

ಶ್ರೀ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಿದ ಬಳಿಕ ರಥೋತ್ಸವವನ್ನು ನಡೆಸಲಾಯಿತು. ಬೀದಿಯುದ್ದಕ್ಕೂ ಸಾಲು ವಿದ್ಯುದ್ದೀಪಗಳು ಮತ್ತು ಆಕರ್ಷಕ ಸಿಡಿಮದ್ದುಗಳಿಂದ ಆವೃತಗೊಂಡ ರಥಬೀದಿಯಲ್ಲಿ ಮೂರು ರಥಗಳ ಉತ್ಸವ ಸಾಗಿ ಭಕ್ತಗಣವನ್ನು ಸಂಪ್ರೀತಗೊಳಿಸಿತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...