Ajio ಸಹಯೋಗದಲ್ಲಿ ಹೊಸ ವರ್ಷದ ಕೊಡುಗೆ

ನವದೆಹಲಿ: ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಗ್ರಾಹಕರಿಗಾಗಿ ಭರ್ಜರಿ ಆಫರ್‌ ಘೋಷಿಸಿದೆ. ಪ್ರಿಪೇಯ್ಡ್ ಬಳಕೆದಾರರಿಗೋಸ್ಕರ ಬಿಡುಗಡೆ ಮಾಡಿರುವ ಈ ಆಫರ್‌ನಲ್ಲಿ 100% ಕ್ಯಾಷ್ ಬ್ಯಾಕ್ ಸೌಲಭ್ಯವನ್ನು Jio ನೀಡಿದೆ

399 ರೂ.ಗಳ ರೀಚಾರ್ಜ್ ಮಾಡಿಸಿದರೆ ಮೈಜಿಯೋ ಕೂಪನ್ ಸೆಕ್ಷನ್ ನಲ್ಲಿ ಕೂಪನ್ ಕ್ರೆಡಿಟ್ ಆಗಲಿದೆ. ನಂತರ ಎಜಿಯೋ ಆಪ್ ಅಥವಾ ವೆಬ್ ಸೈಟ್ ನಲ್ಲಿ ಕೂಪನ್ ನ್ನು ಬಳಕೆ ಮಾಡಬಹುದಾಗಿದೆ.

ರಿಲಾಯನ್ಸ್ ಜಿಯೋ
reliance jio

ಬಳಕೆದಾರರಿಗೆ 100% ಕ್ಯಾಷ್ ಬ್ಯಾಕ್ ಆಫರ್ Ajio ಕೂಪನ್ ಮೂಲಕ ಸಿಗಲಿದೆ. ಬಳಕೆದಾರರು ಅದನ್ನು ಬಳಿಕ ರೀಡೀಮ್ ಮಾಡಿಕೊಳ್ಳಬಹುದು. Ajio, ರಿಲಯನ್ಸ್ ರೀಟೆಲ್ಸ್ ನ ಇ-ಕಾಮರ್ಸ್ ಅಂಗವಾಗಿದ್ದು, ಕೂಪನ್ ಇದ್ದವರು ajio.com ನಲ್ಲಿ ಶಾಪಿಂಗ್ ಮಾಡುವ ಮೂಲಕ ಕೂಪನನ್ನು ರಿಡೀಮ್ ಮಾಡಿಕೊಳ್ಳಬಹುದು.

 ಹೊಸ ಹಾಗೂ ಈಗಿರುವ ಜಿಯೋ ಗ್ರಾಹಕರಿಗೆ ಈ ಆಫರ್ ಅನ್ವಯವಾಗಲಿದ್ದು ಜ.31 ವರೆಗೆ ಲಭ್ಯವಿರಲಿದೆ. ಕೂಪನ್ ಗಳನ್ನು ಮಾರ್ಚ್ 15 ಒಳಗೆ ಬಳಕೆ ಮಾಡಬಹುದಾಗಿದೆ.

ಕಳೆದ ವರ್ಷವೂ Jio ಇಂತಹದ್ದೇ ಆಫರನ್ನು ಪ್ರಕಟಿಸಿತ್ತು. ಆದರೆ ಅದು ಮೈಜಿಯೋ ಆಯಪ್ ನಲ್ಲಿ ಮಾತ್ರ ರಿಡೀಮ್ ಮಾಡಬಹುದಾಗಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...