reliance foundation ರಿಲಯನ್ಸ್‌ನಿಂದ 78 ಟನ್ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿ ಸಂಗ್ರಹ

reliance foundation
reliance foundation chairperson nita ambani

reliance foundation ಮರುಬಳಕೆ ಪ್ಲಾಸ್ಟಿಕ್‍ಗೆ ಒತ್ತು ನೀಡುವ ರಿಲಯನ್ಸ್ ಅಭಿಯಾನ

ಮುಂಬೈ:  ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮರುಬಳಕೆಯನ್ನು ( reliance foundation ) ಪ್ರೋತ್ಸಾಹಿಸುವ ಸಲುವಾಗಿ ರಿಲಯನ್ಸ್ ಫೌಂಡೇಶನ್ಅ ಭಿಯಾನವೊಂದನ್ನು ನಡೆಸಿ, ಮತ್ತೆ ಬಳಸಬಹುದಾದಂತ 78 ಟನ್ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿದೆ.

ಇದನ್ನೂ ಓದಿ: ಇನ್ಫೋಸಿಸ್‌ನಲ್ಲಿ 10 ಸಾವಿರ ಉದ್ಯೋಗಿಗಳ ನೌಕರಿ ಕಟ್

ರಿಲಯನ್ಸ್ ನ ಮೂರು ಲಕ್ಷ ಉದ್ಯೋಗಿಗಳು, ಅವರ ಕುಟುಂಬ ಸದಸ್ಯರು ಮತ್ತು ಆರ್‌ಐಎಲ್‌ನ ಪಾಲುದಾರರು ಮತ್ತು ಅದರ ಸಂಬಂಧಿತ ಉದ್ಯಮಗಳಾದ ಜಿಯೋ ಮತ್ತು ರಿಲಯನ್ಸ್ ರಿಟೇಲ್‌ನಂತ ಎಲ್ಲಾ ಸದಸ್ಯರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಭಾರತದ ಹಲವಾರು ನಗರಗಳಲ್ಲಿ ಏಕ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುವ ಮೂಲಕ ಹೊಸದೊಂದು ದಾಖಲೆಗೆ ಸಾಕ್ಷಿಯಾಗಿದ್ದಾರೆ.

ರಿಸೈಕಲ್ ಫಾರ್ ಲೈಫ್ ಎಂಬ ಹೆಸರಿನ ಈ ಅಭಿಯಾನದ ಸಲುವಾಗಿ ನೌಕರರು ತಮ್ಮ ಸುತ್ತಮುತ್ತಲಿನ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಮರುಬಳಕೆಗಾಗಿ ತಮ್ಮ ಕಚೇರಿಗಳಿಗೆ ತರಲು ಪ್ರೋತ್ಸಾಹಿಸಲಾಯಿತು.

ರಿಲಯನ್ಸ್ ಫೌಂಡೇಶನ್‌ ಸ್ವಚ್ಛಾತಾ ಹಿ ಸೇವಾ ಸಂದೇಶವನ್ನು ಉತ್ತೇಜಿಸಲು ನಿರಂತರ ಪ್ರಯತ್ನವನ್ನು ಮಾಡುತ್ತಿದೆ, ಈ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಮರುಬಳಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಾವು ರಿಸೈಕಲ್ ಫಾರ್ ಲೈಫ್ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ಅಧ್ಯಕ್ಷೆ ನೀತಾ ಅಂಬಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...