red alert ನೆರೆ, ಮಳೆ: ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್‌

red alert
krishna woes

red alert ಬಿರುಮಳೆ, ನೆರೆ ಸ್ಥಿತಿಯ ಹಿನ್ನೆಲೆಯಲ್ಲಿ ಗರಿಷ್ಠ ಮುನ್ನೆಚ್ಚರಿಕೆ

ಬೆಂಗಳೂರು: ಬಿಡದೆ ಸುರಿಯುತ್ತಿರುವ ಮಳೆ ಮತ್ತು ಉಕ್ಕೇರಿ ಹರಿಯುತ್ತಿರುವ ನದಿಗಳಿಂದ ( red alert) ಉಂಟಾಗಿರುವ ನೆರೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಗರಿಷ್ಠ ಮುನ್ನಚ್ಚರಿಕೆ (ರೆಡ್ ಅಲರ್ಟ್‌) ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ತುಂಬಿ ತುಳುಕುತ್ತಿರುವ ಜಲಾಶಯಗಳು, ಇನ್ನಷ್ಟು ನೆರೆ ಭೀತಿ

ಭಾರಿ ಮಳೆ ಮತ್ತು ನದಿಗಳ ಪ್ರಕೋಪಕ್ಕೆ ನಲುಗಿಹೋಗಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಹವಾಮಾನ ಇಲಾಖೆ ತೀವ್ರ ಮುನ್ನಚ್ಚರಿಕೆಯ ಗಮಟೆ ಬಾರಿಸಿದೆ.

ಈ ಣಾಗಗಳಲ್ಲಿ ಮುಂದಿನ ಒಂದೆರಡು ದಿನದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದು ನೆರೆ ಸ್ಥಿತಿ ಇನ್ನಷ್ಟು ಬಿಗಡಾಯಿಸಬಹದುದಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಗರಿಷ್ಠ ಮುನ್ನೆಚ್ಚರಿಕೆ ಅಗತ್ಯ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಕ್ಷದ ದಿಲ್ಲಿ ಬಾಸ್‌ಗಳ ಕಟ್ಟಪ್ಪಣೆಯ ಮೇರೆಗೆ ದಿಲ್ಲಿಯಿಂದ ವಾಪಸಾಗುತ್ತಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆಪೀಡಿತ ಬೆಳಗಾವಿಯಲ್ಲಿ ಗುರುವಾರ ನೆರೆ ಪೀಡಿತರ ನೋವಿಗೆ ಕಿವಿಯಾದರು.

ಕಳೆದ ಸುಮಾರು ಮೂರ್‍ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೇ ಮಳೆಯಾಗುತ್ತಿದ್ದು, ನಾಗರೀಕರು ಕಂಗೆಟ್ಟಿದ್ದಾರೆ.

ಈ ಮಧ್ಯೆ, ಪ್ರವಾಸಿತಾಣಗಳಾದ ದತ್ತಗಿರಿ, ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದ ಹಲವೆಡೆ ಗುಡ್ಡಕುಸಿತ ಉಂಟಾಗಿದೆ. ಮಂಜಿನ ನಡುವೆ ಕೆಲವೆಡೆ ಗುಡ್ಡಕುಸಿತ ಉಂಟಾಗುತ್ತಿದ್ದು, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...