rebels worried ಅನರ್ಹರಿಗೆ ಬಿಜೆಪಿ ಕಾರ್‍ಯಕರ್ತರ ಒಳೇಟಿನದ್ದೇ ಚಿಂತೆ

rebels worried

rebels worried ಸ್ಥಳೀಯ ಮಟ್ಟದ ಕಾರ್‍ಯಕರ್ತರು, ಮುಖಂಡರ ಬೆಂಬಲ ಇನ್ನೂ ಅನುಮಾನ

ಬೆಂಗಳೂರು: ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ( rebels worried ) ಎಂದು ಖುದ್ದು ಮುಖಯಮಂತ್ರಿ ಯಡಿಯೂರಪ್ಪನವರೇ ಅನರ್ಹರ ಪರ ಸಾರಥ್ಯ ವಹಿಸಿದ್ದರೂ ಕಾರ್‍ಯಕರ್ತರ ಮಟ್ಟದಲ್ಲಿ ಗೋಚರವಾಗಿರುವ ಒಳೇಟಿನ ಬಗ್ಗೆ ಅನರ್ಹ ಶಾಸಕರು ಚಿಂತಿತರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕ್ರಿಕೆಟ್: ನಾಯಕ ಮನೀಶ್ ಮಿಂಚು: ಕರ್ನಾಟಕ ಚಾಂಪಿಯನ್

ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ ಕನಿಷ್ಟ 10 ಕ್ಷೇತ್ರಗಳಲ್ಲಿ ಅನರ್ಹರಿಗೆ ಬಜೆಪಿ ಕಾರ್‍ಯಕರ್ತರು ಹಾಗೂ ಸ್ಥಳೀಯ ಮುಖಂಡರ ಸಂಪೂರ್ಣ ಸಹಕಾರ ಸಿಗುತ್ತಿಲ್ಲ. ಮೇಲ್ನೋಟಕ್ಕೆ ಎಲ್ಲರೂ ಪ್ರಚಾರದಲ್ಲಿ ಕಾಣಿಸಿಕೊಂಡರೂ ಅದು ಒಲ್ಲದ ಮನಸ್ಸಿನ ಕಾಯಕ ಎಂಬಂತಹ ಪರಿಸ್ಥಿತಿ ಇದೆ.

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಅನರ್ಹರ ಪರವಾಗಿ ಅವಿರತ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಎರಡನೇ ಹಂತದ ನಾಯಕರು ಮತ್ತು ಸ್ಥಲೀಯ ಕಾರ್‍ಯಕರ್ತರು ಅನರ್ಹರ ಪರ ಅಷ್ಟಾಗಿ ನಿಂತಿಲ್ಲ ಎಂದು ವರದಿಯಾಗಿದೆ.

ಬಳ್ಳಾರಿ, ಗೋಕಾಕ, ಅಥಣಿ, ರಾಣೆಬೆನ್ನೂರು, ಹಾವೇರಿ, ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು ಮುಂತಾದೆಡೆ ಬಿಜೆಪಿಯ ಸ್ಥಳೀಯ ನಾಕರು ಒಂದಿಲ್ಲೊಂದು ಕಾರಣ ಕೊಟ್ಟು ತಟಸ್ತರಾಗಿದ್ದಾರೆ. ಮತದಾನದ ಮೇಳೆ ಇದು ಯಾವ ರೀತಿ ಪ್ರಭಾವ ಬೀರಬಹುದು ಎಂದುದೇ ಅನರ್ಹರಿಗೆ ಚಿಂತೆಯ ವಿಷಯವಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...