rebels unhappy ಜೆಡಿಎಸ್ ಜೊತೆ ಬಿಜೆಪಿ ದೋಸ್ತಿ ಮಾತು, ಅರ್ನಹರಿಗೆ ಅಜೀರ್ಣ

rebels unhappy
cm bsy and ramesh jarkiholi

rebels unhappy ಇದಕ್ಕಾಗಿನಾ ನಾವು ರಾಜೀನಾಮೆ ನೀಡಿದ್ದು ಎಂದು ಅನರ್ಹರ ಅಳಲು

ಬೆಂಗಳೂರು: ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ( rebels unhappy) ಜೆಡಿಎಸ್ ನೆರವು ಪಡೆಯಲು ಬಿಜೆಪಿ ಸಜ್ಜಾಗುತ್ತಿರುವುದು ಈ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಅನರ್ಹ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: ಆಡಿಯೋ, ವಿಡಿಯೋ ಭೀತಿ: ಸಿಎಂ ಯಡಿಯೂರಪ್ಪ ಸುತ್ತ ಮೊಬೈಲ್ ಬ್ಯಾನ್

ಇತ್ತೀಚಿನ ದಿನಗಳಲ್ಲಿ ಜೆಡಿಎಸ್‌ನ ಅಗ್ರ ನಾಯಕರಾದ ಎಚ್ಡಿಕೆ, ಎಚ್ಡಿಡಿ ಬಿಜೆಪಿ ಬಗ್ಗೆ ತೋರುತ್ತಿರುವ ಮೃದು ಧೋರಣೆ ಮತ್ತು ಸರಕಾರ ಬೀಲಲು ಬಿಡುವುದಿಲ್ಲ ಎಂಬ ಬಹಿರಂಗ ಹೇಳಿಕೆ ಅನರ್ಹರಲ್ಲಿ ಕೊಂಚ ನಡುಕ ಮೂಡಿಸಿದೆ.

ಇದೇ ವೇಳೆ ಜೆಡಿಎಸ್‌ನ ಸಖ್ಯದ ಮಾತನ್ನು ಅಷ್ಟೇ ಆಸ್ಥೆಯಿಂದ ಬಿಜೆಪಿ ಸ್ವೀಕರಿಸಲು ಮುಮದಾಗಿರುವುದು ರಾಜೀನಾಮೆ ನೀಡಿ ಅನರ್ಹಗೊಂಡು ಯಡಿಯೂರಪ್ಪನವರನ್ನು ಸಿಎಂ ಮಾಡಿದ ಶಾಸಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಯಾವು ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸಿ, ಆರೋಪಗಳನ್ನು ಮಾಡಿ ರಾಜೀನಾಮೆ ನೀಡಿಬಂದೆವೋ ಈಗ ಅವರ ಹಂಗಿನಲ್ಲಿಯೇ ಮತ್ತೆ ನಡೆಯಬೇಕೆ ಎಂದು ಅನರ್ಹರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ಪ್ರತ್ಯಕ್ಷ ಅಥವ ಪರೋಕ್ಷವಾಗಿ ಜೆಡಿಎಸ್ ಜೊತೆ ನಂಟು ರೂಢಿಸಿಕೊಳ್ಳದಂತೆ ಅನರ್ಹ ಶಾಸಕರು ಬಿಜೆಪಿ ನಾಯಕರು ಅದರಲ್ಲಿಯೂ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...