rebels promised ಉಪ ಸಮರದಲ್ಲಿ ಸೋತರೂ ಮಂತ್ರಿಗಿರಿ: ಅನರ್ಹರಿಗೆ ಬಿಜೆಪಿ ಭರವಸೆ

cabinet expansion
cm bsy and ramesh jarkiholi

rebels promised  ತಲೆದಂಡಕ್ಕೆ ಸಿದ್ಧವಾಗಿರಲು ಎಂಎಲ್ಸಿಗಳಿಗೆ ಸೂಚನೆ

ಬೆಂಗಳೂರು: ತೀವ್ರ ಹಣಾಹಣಿಗೆ ವೇದಿಕೆಯಾಗಿರುವ ಮುಂಬರುವ ( rebels promised  ) ಉಪ ಚುನಾವಣೆ ಅನರ್ಹರು ಹಾಗೂ ಸರಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಸೋತಲ್ಲಿ ಅನರ್ಹರ ರಾಜಕೀಯ ಭವಿಷ್ಯ ಸದ್ಯಕ್ಕೆ ಮಂಕಾಗುವುದು ಸಹಜ. ಇದವು ಅನೇಕರಲ್ಲಿ ಆತಂಕಕ್ಕೆ ಕಾರಣವೂ ಆಗಿದೆ.

ಇದನ್ನೂ ಓದಿ: ಮತದಾರರ ಮಂಗಳಾರತಿ ಕಂಡು ಬೆಚ್ಚಿದ ಅನರ್ಹರು

ಆದರೆ ಯಾರಿಗೂ ಇಂತಹ ಆತಂಕ ಬೇಡ ಎಂದು ಬಿಜೆಪಿ ಅಭಯ ನೀಡಿರುವುದಾಗಿ ವರದಿಯಾಗಿದೆ. ಹೌದು ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲ ಅನರ್ಹರಿಗೂ ಮಂತ್ರಿ ಭಾಗ್ಯ ನೀಡುತ್ತಾರಂತೆ!

ಈ ಚುನಾವಣೆಯ ಮಹತ್ವ ಅರಿತಿರುವ ಹೈಕಮಾಂಡ್ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಇದರಂತೆ ಚುನಾವಣೆಯಲ್ಲಿ ಸೋತರೇ ಭವಿಷ್ಯ ಮುಸುಕಾಯಿತು ಎಂದು ಯಾವ ಅನರ್ಹರೂ ಚಿಂತೆ ಮಾಡಬೇಕಿಲ್ಲ. ಏಕೆಂದರೆ ಸೋತ ಅನರ್ಹರನ್ನು ಪರಿಷತ್ ಮೂಲಕ ವಿಧಾನಸೌಧದ ಮೆಟ್ಟಿಲೇರಿಸಲು ಬಿಜೆಪಿ ತೀರ್ಮಾನಿಸಿದೆ.

ಎಲ್ಲ 15 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಸ್ಯಂ ಯಡಿಯೂರಪ್ಪನವರು ಹೇಳುತ್ತಿದ್ದರೂ ಒಳಗೊಳಗೆ ಐದರಿಂದ ಆರು ಮಂದಿ ಅನರ್ಹರು ಸೋಲಬಹುದು ಎಂಬ ವರದಿ ಮುಖ್ಯಮಂತ್ರಿಗಳ ಕೈಸೇರಿರುವುದು ಹೊಸ ವಿಚಾರವೇನಲ್ಲ.

ಒಂದು ವೇಳೆ ಸೋತರೇ ಧೃತಿಗೆಡಬೇಡಿ ನಿಮ್ಮನ್ನು ಮಂತ್ರಿ ಮಾಡಿ 6 ತಿಂಗಳೊಳಗೆ ಪರಿಷತ್ತಿನ ಮೂಲಕ ಶಾಸಕರನ್ನಾಗಿಸುತ್ತೇವೆ ಎಂದು ಬಿಜೆಪಿ ಅನರ್ಹ ಶಾಸಕರಿಗೆ ಭರವಸೆ ನೀಡಿದೆ ಎಂದು ನಂಬಲಾರ್ಹ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಇಂತಹ ಪರಿಸ್ಥಿತಿ ಎದುರಿಸುವ ಸಲುವಾಗಿ ಪಕ್ಷ ನಿಷ್ಠ ಎಂಎಲ್ಸಿಗಳನ್ನು ಈಗಾಗಲೇ ಗುರುತಿಸಲಾಗಿದ್ದು ಅಗತ್ಯ ಬಂದರೇ ಸ್ಥಾನ ತ್ಯಾಗಕ್ಕೆ ಮಾನಸಿಕವಾಗಿ ಸಿದ್ಧರಿರುವಂತೆ ಬಿಜೆಪಿ ನಾಐಕರೂ ಈಗಾಗಲೇ ತಿಳಿಸಿದ್ದಾರೆ ಎಂದೂ ವರದಿ ತಿಳಿಸಿದೆ.

ಒಟ್ಟಿನಲ್ಲಿ ಡಿಸೆಂಬರ್ ಐದರಂದು ನಡೆಯಲಿರುವ ಚುನಾವಣೆ ಬಳಿಕ ಸರಕಾರವನ್ನು ಕೆಡವುತ್ತೇವೆ ಎಂಬ ಉಮೇದು ತೋರುತ್ತಿರುವ ಪ್ರತಿಪಕ್ಷಗಳಿಗೆ ಹುನ್ನಾರ ವಿಫಲಗೊಳಿಸಲು ಬಿಜೆಪಿ ಈ ಮಾಸ್ಟರ್‍ ಪ್ಲಾನ್ ಹಾಕಿಕೊಂಡಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...