rebels hopes ಅನರ್ಹರ ಸ್ಥಿತಿ ಅತಂತ್ರ, 13ರವರೆಗಿಲ್ಲ ತೀರ್ಪು

bjp bound
disqualified mla's

rebels hopes ಚುನಾವಣೆ ರದ್ದು ಅರ್ಜಿ 13ಕ್ಕೆ ವಿಚಾರಣೆ ಎಂದ ಸುಪ್ರೀಂ

ಹೊಸದಿಲ್ಲಿ: ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಸುಪ್ರೀಂ ( rebels hopes ) ಕೋರ್ಟಿನತ್ತ ಮುಖ ಮಾಡಿರುವ ಅನರ್ಹ ಶಾಸಕರ ತಳಮಳ ಇನ್ನೂ ಹೆಚ್ಚಾಗಿದೆ. ಅನರ್ಹತೆ ಪ್ರಶ್ನಿಸಿದ್ದ ಅವರ ಅರ್ಜಿ ಸಂಬಂಧದ ತೀಪು ಕನಿಷ್ಟ 13ರ ತನಕ ಬರುವ ಯಾವುದೇ ಸೂಚನೆಗಳಿಲ್ಲ.

ಇದನ್ನೂ ಓದಿ: ಸುಪ್ರೀಂ ತೀರ್ಪಿನ ತವಕ: ಅನರ್ಹರು ದಿಲ್ಲಿಗೆ ದೌಡು

ಅನರ್ಹತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಅಂತ್ಯಗೊಂಡಿದ್ದರೂ ಇನ್ನೂ ತೀರ್ಪು ಪ್ರಕಟವಾಗಿಲ್ಲ. ಈ ಪರಿಸ್ಥಿತಿಯಲ್ಲಿ ಚುನಾವಣೆ ಮುಂದೂಡುವಂತೆ ಅನರ್ಹರ ಪರ ವಕೀಲ ಮುಕುಲ್ ರೋಹ್ಟಗಿ ಮಾಡಿದ ಮನವಿಗೆ ತಕ್ಷಣದ ಪುರಸ್ಕಾರ ಸಿಕ್ಕಿಲ್ಲ.

ಚುನಾವಣೆ ಮುಂದೂಡುವುದು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟು ರೋಹ್ಟಗಿ ಅವರು ಸಲ್ಲಿಸಿದ ಮನವಿಯನ್ನು 13ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಅಂದರೆ ಕನಿಷ್ಟ ಅಲ್ಲಿಯ ತನಕ ಅನರ್ಹರ ಗೋಳು ತಪ್ಪಿದ್ದಲ್ಲ.

ಈ ಮಧ್ಯೆ ನ, 11ರಿಂದ ಚುನಾವನಾ ನೀತಿ ಸಂಹಿತೆ ಜಾರಿಗೆ ಬರಲಿದ್ದು ನ.18 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಕಾಂಗ್ರೆಸ್ ಪಕ್ಷವು ಎಂಟು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿ ಅವರು ತಮ್ಮ ಕೆಲಸ ಶುರುವಿಟ್ಟುಕೊಂಡಿದ್ದಾರೆ. ತಮ್ಮ ಸ್ಪರ್ಧೆಯ ಬಗ್ಗೆಯೇ ಸ್ಪಷ್ಟತೆ ಇಲ್ಲದಿರುವುದು ಅನರ್ಹರನ್ನು ಆತಂಕಕ್ಕೆ ದೂಡಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...