rebels face ಮತದಾರರ ಮಂಗಳಾರತಿ ಕಂಡು ಬೆಚ್ಚಿದ ಅನರ್ಹರು

rebels face
karnataka rebel leaders

rebels face ಅನೇಕ ಕಡೆ ಅನರ್ಹರ ವಿರುದ್ಧ ಜನರ ಆಕ್ರೋಶ

ಬೆಂಗಳೂರು: ರಾಜೀನಾಮೆ ನೀಡಿ ಅನರ್ಹರಾದರೂ ( rebels face ) ಚುನಾವಣೆಗೆ ಸ್ಪರ್ಧಿಸಲು ಅರ್ಹರಾದ ಶಾಸಕರು ಇದೀಗ ತಮ್ಮ ನಡೆಗೆ ಮತದಾರ ಪ್ರಭುಗಳಿಂದಲೇ ತೀವ್ರ ವಿರೋಧ ಎದುರಿಸಬೇಕಾಗಿ ಬಂದಿದೆ. ಅನೇಕ ಕಡೆಗಳಲ್ಲಿ ಅನರ್ಹರ ನಡೆ ವಿರುದ್ಧ ಮತದಾರರ ಆಕ್ರೋಶಗೊಂಡಿದ್ದಾರೆ.

ಇದನ್ನೂ ಓದಿ: ಡಿ.9ರ ನಂತರ ರಾಜ್ಯದಲ್ಲಿ ರಾಜಕೀಯ ಪಲ್ಲಟ: ಡಿಕೆಶಿ ಗುಡುಗು

ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಅನರ್ಹರ ನಡೆಯನ್ನು ಪ್ರಶ್ನಿಸುವ ಮತದಾರರಿಗೇನೂ ಕಡಿಮೆ ಇಲ್ಲ. ನೆರೆ ವಿಚಾರ ಹಿಡಿದು ಹಲವೆಡೆ ಮತದಾರರ ಅನರ್ಹರ ಕ್ರಮವನ್ನು ಟೀಕಿಸಿದರೆ ಕೆಲವೆಡೆ ವರ್ಷದಲ್ಲಿ ಮತ್ತೆ ಚುನಾವಣೆಬೆ ಬಂದಿರುವುದಕ್ಕಾಗಿ ಅನರ್ಹರನ್ನು ಪ್ರಶ್ನಿಸಿದ್ದಾರೆ.

ಹುಣಸೂರು, ಗೋಕಾಕ, ಕಾಗವಾಡ, ಹೊಸಕೋಟೆ, ಚಿಕ್ಕಬಳ್ಳಾಪುರ, ಅಥಣಿ, ಯಲ್ಲಾಪು ಮುಂತಾದ ಕಡೆಗಳಲ್ಲಿ ಅನರ್ಹರ ವಿರುದ್ಧ ಮತದಾರರ ಆಕ್ರೋಶ ವ್ಯಾಪಕವಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಮತದಾರರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲೂ ಅನರ್ಹರು ತಡಬಡಾಯಿಸಿದ ವರದಿಗಳಿವೆ.

ಇನ್ನು ಅಥಣಿ ತಾಲೂಕಿನ ತಲಸಂಗ ಗ್ರಾಮದಲ್ಲಂತೂ ನಮ್ಮ ಊರಿಗೆ ಕಾಲಿಡಬೇಡಿ ಎಂದು ಅನರ್ಹರನ್ನು ಎಚ್ಚರಿಸುವ ಬೋರ್ಡುಗಳನ್ನು ಹಾಕಲಾಗಿದೆ. ವಿಪರ್‍ಯಾಸವೆಂದರೆ ಇದು ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸುತ್ತಿರುವ ಮಹೇಶ್ ಕುಮಟಳ್ಳಿ ಅವರ ಸ್ವಗ್ರಾಮ.

ಅಥಣಿ ಶಿವಯೋಗಿಗಳ ಪುಣ್ಯ ಕ್ಷೇತ್ರ, ಇಲ್ಲಿ ಹಣಕ್ಕಾಗಿ ತಮ್ಮ ಶಾಸಕರ ಸ್ಥಾನವನ್ನೇ ಮಾರಾಟ ಮಾಡಿಕೊಂಡಿದ್ದಾರೆ. ಇಂತಹ ಹಣಕ್ಕಾಗಿ ಮಾರಾಟ ಮಾಡಿಕೊಂಡ ಅನರ್ಹರಿಗೆ ನಮ್ಮ ಗ್ರಾಮದಲ್ಲಿ ಪ್ರವೇಶವಿಲ್ಲ ಎಂಬ ಬೋರ್ಡು ಇಲ್ಲಿ ರಾರಾಜಿಸುತ್ತಿದೆ. ಇದು ವಿರೋಧಗಳ ಕುಕೃತ್ಯ, ಪ್ರತ್ಯೇಕ ಘಟನೆಗಳು ಎಂದು ಎಷ್ಟೇ ಸಮಾಧಾನ ತೋರಿದರೂ ಅನರ್ಹರಲ್ಲಿ ಒಳಗೊಳಗೇ ಆತಂಕ ಮೂಡಿಸಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...