rcep ರೈತ ದನಿಗೆ ತಲೆಬಾಗಿದ ಮೋದಿ: ಮಾರಕ ಆರ್ಸಿಇಪಿ ಗೆ ಸಹಿ ಇಲ್ಲ

rcep
rcep negotiations

rcep ನಿರ್ಧಾರವನ್ನು ಮುಂದಿನ ವರ್ಷಕ್ಕೆ ಮುಂದೂಡಿದ ಭಾರತ

ಬ್ಯಾಂಕಾಕ್: ಭಾರತದ ರೈತ ದನಿಗೆ ಮೋದಿ ( rcep ) ಸದರಕಾರ ತಲೆಬಾಗಿದೆ. ರೈತರಿಗೆ ಅದರಲ್ಲಿಯೂ ಹೈನು ಕೃಷಿ ಮಾಡುವವರಿಗೆ ಮಾರಕವಾಗುತ್ತಿದ್ದ ಆರ್ಸಿಇಪಿ ಒಪ್ಪಂದಕ್ಕೆ ಸದ್ಯಕ್ಕೆ ಸಹಿ ಹಾಕದಿರಲು ಭಾರತ ನಿರ್ಧರಿಸಿದೆ.

ಇದನ್ನೂ ಓದಿ: ಉಪ ಚುನಾವಣೆವರೆಗೆ ರಾಜ್ಯಪಾಲ ವಾಲಾ ಸೇಫ್

ಬ್ಯಾಂಕಾಕಿನಲ್ಲಿ ನಡೆದ ಆಸಿಯಾನ್ ದೇಶಗಳ ಶೃಂಗಸಭೆಯ ವೇಳೆ ಈ ಮಹತ್ವದ ಒಪ್ಪಂದದ ಕುರಿತಾದ ವಿಸ್ತೃತ ಚರ್ಚೆಯ ಬಳಿಕ ಸದ್ಯದ ಪರಿಸ್ಥಿತಿಯಲ್ಲಿ ಒಪ್ಪಂದದ ಭಾಗವಾಗಲು ಭಾರತ ನಿರಾಕರಿಸಿತು.

ಆರ್‌ಸಿಇಪಿ ಒಪ್ಪಂದದ ಪ್ರಸ್ತುತದ ಸ್ವರೂಪವು ಆರ್‌ಸಿಇಪಿಯ ಮೂಲ ಉದ್ದೇಶ ಮತ್ತು ಒಪ್ಪಿತವಾಗಿದ್ದ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಿಲ್ಲ. ಇಂತಹ ನಿರ್ಧಾರಗಳಲ್ಲಿ ಭಾರತದ ರೈತರು, ವ್ಯಾಪಾರಿಗಳ ಭವಿಷ್ಯ ಻ಡಗಿದ್ದು, ಆತುರದ ಕ್ರಮ ಸಾಧ್ಯವಿಲ್ಲ ಎಂದು ಹೇಳಿದರು.

ಈಗಿರುವಂತೆ ಆರ್ ಸಿಇಪಿ ಒಪ್ಪಂದವು ಭಾರತದ ಕಾಳಜಿ ಅಥವಾ ಮೂಲ ಉದ್ದೇಶ ಮತ್ತು ಒಪ್ಪಿತ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿಲ್ಲ ಎಂದು ಮೋದಿ ಹೇಳಿದ್ದಾರೆ.

ಆರ್‌ಸಿಇಪಿ ಅಡಿಯಲ್ಲಿ ಚೀನಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಶೇ 74ರಷ್ಟು ಸರಕುಗಳು ಹಾಗೂ ಜಪಾನ್, ದಕ್ಷಿಣ ಆಫ್ರಿಕಾ ಮತ್ತು ಆಸಿಯಾನ್‌ನ ಒಟ್ಟು 15 ದೇಶಗಳ ಶೇ 90ರಷ್ಟು ಸರಕುಗಳ ಮೇಲಿನ ಸುಂಕವನ್ನು ಭಾರತ ತೆಗೆದುಹಾಕಬೇಕಾಗುತ್ತದೆ. ಅದರಲ್ಲಿಯೂ ಚೀನಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಸುನಾಂಇಯಂತೆ ಅಪ್ಪಳಿಸುವ ಆತಂಕವೂ ಇದೆ.

ಈ ಒಪ್ಪಂದದಡಿ ಹೈನು ಕೃಷಿಕರಿಗೆ ಭಾರೀ ನಷ್ಟ ುಂಟಾಗುವ ಭಿತಿ ಇತ್ತು. ಆ ಕಾರಣ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ವ್ಯಾಪಕ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...