rbi forecast ದೇಶದ ಅಭಿವೃದ್ಧಿ ಕುಸಿತ, ಜಿಡಿಪಿ ಅಂದಾಜು ದರ ಇಳಿಸಿದ ಆರ್‍ಬಿಐ

rbi forecast
indian economy

rbi forecast ರೆಪೋ ದರ ಇಳಿಕೆ ಮಾಡಿದ ರಿಸರ್ವ್‌ ಬ್ಯಾಂಕ್

ಮುಂಬೈ: ಪ್ರಸಕ್ತ ಹಣಕಾಸಿನ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧ ದರ ( rbi forecast ) ಕುಂಠಿತವಾಗಲಿದೆ ಎಂದು ರಿಸರ್ವ್‌ ಬ್ಯಾಂಕ್ ಅಂದಾಜಿಸಿದೆ. ಈ ಅಂಧಾಜಿನ ಬೆನ್ನಲ್ಲಿಯೇ ಶೇರುಪೇಟೆ ಸಹ ಏರಿಕೆಯ ಹಾದಿಯಿಂದ ಇಳಿಕೆಯ ಪರ್ವಕ್ಕೆ ತಿರುಗಿತು.

ಇದನ್ನೂ ಓದಿ: ನೆರೆ ಪರಿಹಾರ: ಕೈಎತ್ತಿದ ಕೇಂದ್ರ, ಅಡಕತ್ತರಿಯಲ್ಲಿ ಯಡಿಯೂರಪ್ಪ

ಈ ವರ್ಷಕ್ಕೆ ಭಾರತದ ಆರ್ಥಿಕ ಅಭಿವೃದ್ಧ ದರವನ್ನು (gdp) 6.9%ಕ್ಕೆ ಈ ಮೊದಲು ನಿಗದಿ ಮಾಡಲಾಗಿತ್ತು. ಆದರೆ ಈಗ ಆ ಅಂದಾಜನ್ನು 6.1%ಗೆ ರಿಸರ್ವ್‌ ಬ್ಯಾಂಕು ತಗ್ಗಿಸಿರುವುದು ಪೇಟೆಯಲ್ಲಿ ಕೊಂಚ ಆತಂಕ ಸೃಷ್ಟಿಸಿದೆ.

ಭಾರತವು ಮತ್ತೆ ಶೇ 7 ರ ಆರ್ಥಿಕ ಅಭಿವೃದ್ಧಿ ದರವನ್ನು ಮುಟ್ಟಲು ಕನಿಷ್ಟ ಎರಡು ವರ್ಷ ಬೇಕಾಗುತ್ತದೆ ಎಂದೂ ರಿಸರ್ವ್‌ ಬ್ಯಾಂಕ್ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.

ಈ ಮಧ್ಯೆ ಆರ್‍ಬಿಐ ಸತತ ಐದನೇ ಬಾರಿ ರೆಪೋ ದರವನ್ನು ಶುಕ್ರವಾರ ಇಳಿಕೆ ಮಾಡಿತು. ರೆಪೋ ದರದಲ್ಲಿ 0.25 ಅಂಕಗಳಷ್ಟು ಕಡಿತ ಮಾಡಿದೆ. ಈಗಿನಂತೆ ರೆಪೋ ದರ 5.15 ರಷ್ಟಿರಲಿದ್ದು, ರಿವರ್ಸ್ ರೆಪೋ ದರ ಕೂಡ 4.9 ಕ್ಕೆ ಇಳಿಕೆ ಮಾಡಲಾಗಿದೆ.

ಗೃಹ ಮತ್ತು ವಾಹನ ಸಾಲದ ಬಡ್ಡಿ ತಗ್ಗಿಸಲು ರೆಪೋ ದರ ಇಳಿಕೆ ಸಹಕಾರಿಯಾಗಲಿದೆ. ದೇಶದೊಳಗಿನ ವಾಣಿಜ್ಯ ಬ್ಯಾಂಕ್ ಗಳಿಂದ ಆರ್ ಬಿಐ ಸಾಲ ಪಡೆಯುವ ಬಡ್ಡಿ ದರವೇ ರಿವರ್ಸ್ ರೆಪೋ ದರ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...