ramya ಅಕ್ಟೋಬರಿನಲ್ಲಿ ರಮ್ಯಾ ಕಲ್ಯಾಣ?

ramya
sandalwood heroine ramya

ramya ವಿದೇಶಿ ವರನ ಜೊತೆ ದಾಂಪತ್ಯಕ್ಕೆ ರಮ್ಯಾ ಅಣಿ?

ಬೆಂಗಳೂರು: ಊರಿಗೊಬ್ಳೆ ಪದ್ಮಾವತಿ ಎನ್ನುತ್ತಲೇ ಪ್ರೇಕ್ಷಕರನ್ನು ಮೋಡಿ ( ramya ) ಮಾಡಿದ್ದ ಮೋಹಕ ತಾರೆ ರಮ್ಯಾ ಹಸೆಮಣೆ ಏರುವ ಕುರಿತು ಸುದ್ದಿ ಗುಲ್ಲೆಬ್ಬಿದೆ.

ಇದನ್ನೂ ಓದಿ: ಚಿತ್ರ ಪ್ರಶಸ್ತಿ: ನಾತಿಚರಾಮಿಗೆ ಬಂಪರ್‍, ಕೆಜಿಎಫ್‌, ಸರಕಾರಿ ಶಾಲೆಗೆ ರಾಷ್ಟ್ರ ಗರಿ

ಸುಮಾರು ಒಂದು ದಶಕದಿಂದ ಒಡನಾಟದಲ್ಲಿರುವ ರಪೇಲ್ ಎಂಬುವರ ಜೊತೆ ರಮ್ಯಾ ಇನ್ನೆರಡು ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಗಾಳಿಯಷ್ಟೇ ವೇಗವಾಗಿ ಹರಿದಾಡುತ್ತಿದೆ.

ಈ ಬಗ್ಗೆ ಅಮ್ಯಾ ಅವರಾಗಲೀ, ಅವರ ಅಥವ ರಫೇಲ್ ಕುಟುಂಬದ ಪರವಾಗಿಯಾಗಲೀ ಯಾರೊಬ್ಬರೂ ಈ ಸುದ್ದಿಯನ್ನು ಖಚಿತ ಯಾ ನಕಾರಪಡಿಸಿಲ್ಲ.

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯ ಹೊಣೆಗಾರಿಕೆಯಿಂದ ವಿಮುಖರಾದ ರಮ್ಯಾ ಮೊನ್ನೆ ವರಮಹಾಲಕ್ಷ್ಮೀ ಪೂಜೆಯಂದು ಕಾಣಿಸಿಕೊಮಡಿದ್ದು ಬಿಟ್ಟರೇ ಹೆಚ್ಚಾಗಿ ಸಾರ್ವಜನಿಕವಾಗಿ ಖಾಣಿಸಿಕೊಂಡಿಲ್ಲ.

ಲೋಕಸಭೆ ಚುನಾವಣೆಯ ನಂತರ ರಮ್ಯಾ ದಾಂಪತ್ಯ ಜೀವನಕ್ಕೆ ಕಾಲಡಿಉವ ಬಗ್ಗೆ ಕೆಲವು ತಿಂಗಳ ಹಿಂದೆಯೇ ಅವರ ತಾಯಿ ಹೇಳಿಕೆ ನೀಡಿದ್ದನ್ನು ಇಲ್ಲಿ ಗಮನಿಸಬಹುದು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಅಭಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಮ್ಯಾ ಕನ್ನೆ ಮಾತ್ರವಲ್ಲದೇ ತಮಿಳು, ತೆಲುಗು ಚಿತ್ರಗಳಲ್ಲಿಯೂ ಸಾಕಷ್ಟು ಹೆಸರು ಮಾಡಿದ್ದರು. 2013 ರಲ್ಲಿ ನಡೆದ ಮಂಡ್ಯ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ರಮ್ಯಾ ಬಳಿಕ 2014 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು.