ramamurthy ಕೈ ಸಂಸದ ರಾಮಮೂರ್ತಿ ರಾಜೀನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ

ramamurthy
rajyasabha member ramamurthy

ramamurthy ಬಿಜೆಪಿ ಗಾಳಕ್ಕೆ ಬಿದ್ರಾ ಕಾಂಗ್ರೆಸ್ ಸಂಸದ ರಾಮಮೂರ್ತಿ?

ಬೆಂಗಳೂರು: ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಕೆಸಿ. ರಾಮಮೂರ್ತಿ ( ramamurthy ) ಸಂಸದ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿ ಕೈಪಾಳೆಯಕ್ಕೆ ಆಘಾತ ನೀಡಿದ್ದಾರೆ.

ಇದನ್ನೂ ಓದಿ: ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಸಾರಾ ಮಹೇಶ್ ರಾಜೀನಾಮೆ

ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಕೆಸಿ. ರಾಮಮೂರ್ತಿ ಅವರು ಸಂಸದ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ಸಭಾಪತಿಯೂ ಆಗಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ ಅವರು ಖಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆಗೆ ರಾಮಮೂರ್ತಿ ಅವರು ನಿರ್ದಿಷ್ಟ ಕಾರಣ ನೀಡಿಲ್ಲವಾದರೂ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ತೆಕ್ಕೆ ಸೇರಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಬಗ್ಗೆ ಶೀಘ್ರವೇ ರಾಮಮೂರ್ತಿ ಅವರು ನಿಲುವು ಅಧಿಕೃತಗೊಳಿಸಲಿದ್ದಾರೆ ಎನ್ನಲಾಗಿದೆ

ಎರಡನೇ ಬಾರಿಗೆ ಬಿಜೆಪಿ ದಿಲ್ಲಿಯಲ್ಲಿ ಅಧಿಕಾರಕ್ಕೇರಿದ ಬಳಿಕ ರಾಜ್ಯಸಭೆಯಲ್ಲಿ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳು ಪ್ರಯತ್ನದಲ್ಲಿ ಹಲವಾರು ವಿಪಕ್ಷ ಸದಸ್ಯರಿಗೆ ಗಾಳ ಹಾಕಿತ್ತು. ಈಗ ರಾಮಮೂರ್ತಿ ರಾಜೀನಾಮೆಯೂ ಇದೇ ತಂತ್ರದ ಫಲಶ್ರುತಿ ಇರಬಹುದು ಎಂದು ಮೂಲಗಳು ಹೇಳಿವೆ.

ಪಕ್ಷದ ಕೆಲವರ ಅಸಮಾಧಾನದ ನಡುವೆಯೂ ಮಾಜಿ ಪೊಲೀಸ್ ಅಧಿಕಾರಿ ರಾಮಮೂರ್ತಿ ಅವರನ್ನು ಕಾಂಗ್ರೆಸ್ ಪಕ್ಷವು ರಾಜ್ಯಸಭೆಗೆ ಆರಿಸಿ ಕಳುಹಿಸಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...