ram mandir ರಾಮಮಂದಿರ ನಿರ್ಮಾಣ ಯಾವಾಗ?

ram mandir
blueprint of the proposed ram mandir (file photo)

ram mandir ಸುಪ್ರೀಂ ತೀರ್ಪಿನ ನಂತರ ರಾಮಭಕ್ತರಲ್ಲಿ ಹೆಚ್ಚಿದ ಕುತೂಹಲ

ಹೊಸದಿಲ್ಲಿ: ಕಳೆದ ಏಳು ದಶಕಗಳಿಂದ ಪರಿಹಾರ ದ್ವಾರದಲ್ಲಿದ್ದ ( ram mandir ) ಕಾದು ಕುಳಿತಿದ್ದ ಅಯೋಧ್ಯೆ ವಿವಾದಕ್ಕೆ ಸುಪ್ರೀಂ ಕೋರ್ಟು ಪರಿಹಾರದ ದ್ವಾರ ತೋರಿರುವ ಹಿನ್ನೆಲೆಯಲ್ಲಿ ರಾಮನ ಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಯಾವಾಗ ಎಂಬ ಕುತೂಹಲ ಮನೆ ಮಾಡಿದೆ.

ಇದನ್ನೂ ಓದಿ: 1045 ಪುಟಗಳ ಅಯೋಧ್ಯಾ ತೀರ್ಪಿನಲ್ಲೇನಿದೆ?

ವಿವಾದಿತ ಜಾಗದಲ್ಲಿ ರಾಮ ಜನ್ಮಭೂಮಿ ನಿರ್ಮಾಣಕ್ಕೆ ಅನುವು ಮಾಡಿಕೊಡಲು ಅಯೋಧ್ಯಾ ಟ್ರಸ್ಟ್ ರಚಿಸಲು ಹೇಳಿರುವ ಕೋರ್ಟು 90 ದಿನಗಳ ಗಡುವು ವಿಧಿಸಿದೆ. ರಾಮ ಮಂದಿರಕ್ಕೆ ನಿರ್ಮಾಣಕ್ಕೆ ಬೇಕಾದ ತಯಾರಿಗಳು ಈಗಾಗಲೇ ಭರದಿಂದ ಸಾಗಿದ್ದು ಅತಿ ಶೀಘ್ರವೇ ಮಂದಿರ ನಿರ್ಮಾಣ ಸಾಕಾರಗೊಳ್ಳುವ ನಿರೀಕ್ಷೆ ಇದೆ.

ಸರಯೂ ನದಿ ತಟದಲ್ಲಿ ತಲೆ ಎತ್ತಲಿರುವ ರಾಮ ಮಂದಿರದ ಪ್ರಧಾನ ಆಕರ್ಷಣೆಯಾಗಿ 221 ಅಡಿ ಎತ್ತರದ ಮರ್‍ಯಾದಾ ಪುರುಷನ ಪ್ರತಿಮೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದ್ದು ಅದಕ್ಕೆ ನೀಲನಕ್ಷೆಯನ್ನು ಸಹ ಸಿದ್ಧಪಡಿಸಿದೆ.

ಉತ್ತರ ಪ್ರದೇಶ ಸರಕಾರವು ಸಿದ್ಧಪಡಿಸಿರುವ ರಾಮ ಮಂದಿರದ ನೀಲನಕ್ಷೆಯನ್ನು ನೂತನವಾಗಿ ರಚಿತವಾಗಲಿರುವ ಅಯೋಧ್ಯಾ ಟ್ರಸ್ಟ್ ಒಪ್ಪುತ್ತದೋ ಇಲ್ಲ ಅದಕ್ಕೆ ಬದಲಾವಣೆಗಳನ್ನು ಮಾಡುತ್ತದೋ ಎಂಬುದನ್ನು ಇನ್ನೂ ಕಾದು ನೋಡಬೇಕಿದೆ.

ರಾಮ ಮಂದಿರ ವ್ಯಾಜ್ಯ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದರೂ ಮಂದಿರಕ್ಕೆ ಬಳಸಲಾಗುವ ಕಂಬಗಳ ನಿರ್ಮಾಣ, ಕೆತ್ತನೆ ಕೆಲಸಗಳು ಅಯೋಧ್ಯೆಯಲ್ಲಿ ಅವ್ಯಾಹತವಾಗಿ ನಡೆದಿತ್ತು. ಅಲ್ಲದೇ ಇಡೀ ರಾಮಾಯಣ ಮತ್ತು ರಾಮನ ಅವತಾರವನ್ನು ಕಟ್ಟಿಕೊಡುವ ಭವ್ಯ ಶಿಲ್ಪಕಲೆಯ ಸಂಗ್ರಹಾಲಯವನ್ನು ಸಹ ನಿರ್ಮಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...