rakshit ಅವನೇ ಶ್ರೀಮನ್ನಾರಾಯಣ: ರಕ್ಷಿತ್‌ಗೆ ’ಹೊಸ ಚರಿತ್ರೆ ಸೃಷ್ಟಿಸೊ ಅವತಾರ’

rakshit
rakshit shetty in avane srimannarayana

rakshit ನಾರಾಯಣನ ಚಾರ್ಮ್ ಹೇಗಿದೆ? ಚಿತ್ರ ಬಗ್ಗೆ ಒಂಡಿತ-ಪಾಮರರ ಅಭಿಪ್ರಾಯ ಏನು…

ಬೆಂಗಳೂರು: ಮುರು ವರ್ಷಗಳ ಕಠಿಣ ಪ್ರಿಶ್ರಮದ ನಂತರ ( rakshit ) ರಕ್ಷಿತ್ ಶೆಟ್ಟಿ ಹೊಸ ಅವತಾರದಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದು, ಅವರೇ ಹಾಡೊಂದರಲ್ಲಿ ಹೇಳುವಂತೆ ಇದು ಅವರಿಗೆ ಹೊಸ ಚರಿತ್ರ ಸೃಷ್ಟಿಸೋ ಅವತಾರ ಎಂಬಂತಿದೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ: ಶೆಟ್ಟರ್ ಸೇರಿ ಮೂರ್‍ನಾಲ್ಕು ಮಂದಿ ಸಚಿವರಿಗೆ ಕೊಕ್

ಇದು ಚಿತ್ರ ನಾಒಡಿದ ಪಾಮರ-ಪಂಡಿತರ ಅಭಿಪ್ರಾಯ. ಪ್ರೇಕ್ಷಕರಂತೂ ನಾರಾಯಣನ ಈ ಹೊಸ ಅವತಾರದಿಂದ ಮೋಹಿತರಾಗಿದ್ದರೇ, ಪಂಡಿತರು (ವಿಮರ್ಶಕರು) ಸಹ ಅವನೇ ಶ್ರೀಮನ್ನಾರಾಯಣನಿಗೆ ಉಘೆ ಎಂದಿದ್ದಾರೆ. ವಿವಿಧ ವಿಮರ್ಶಕರು ಏನು ಹೇಳಿದ್ದಾರೆ ಎಂಬುದರ ಸಾರ ಇಲ್ಲದೆ…

ಫ್ಯಾಂಟಸಿ ಲೋಕ, ಶ್ರೀಮನ್ನಾರಾಯಣನ ಟ್ರಿಕ್ಸ್‌ಗಳು, ಡಕಾಯಿತರ ಗುಂಪುಗಳು ಇವಲ್ಲವೂ ನೋಡುಗನನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಹೊಸ ವರ್ಷದ ವೀಕೆಂಡ್‌ಗೆ ತಪ್ಪದೇ ನೋಡಬಹುದುದಾದ ಸಿನಿಮಾ ಇದು ಎಂದು ವಿಜಯ ಕರ್ನಾಟಕ ಪತ್ರಿಕೆ ಚಿತ್ರವನ್ನು ವಿಮಶಿಸಿದೆ.

ಫ್ಯಾಂಟಸಿಯನ್ನೇ ಮುಂದಿಟ್ಟು ಕೊಂಡು ಬರುವ ಸಿನಿಮಾಗಳು ಕನ್ನಡಕ್ಕೆ ಹೊಸತು. ನಮಗೆ ಗೊತ್ತಿಲ್ಲದ ಜಗತ್ತನ್ನು ಸೃಷ್ಟಿಸಿ, ಗೊತ್ತಿರುವ ಸಂಗತಿಗಳನ್ನು ಹೇಳುವುದಕ್ಕೆ ಸ್ವಲ್ಪ ಜಾಸ್ತಿ ಧೈರ್ಯ ಬೇಕು. ಅದರಲ್ಲೂ ನಿಧಿಶೋಧದಂಥ ಕತೆಗಳನ್ನು ನಿರ್ವಹಿಸುವುದು ಎಂಥಾ ನಿರ್ದೇಶಕನಿಗೂ ಸವಾಲು. ಅಂಥ ಸವಾಲನ್ನು ರಕ್ಷಿತ್ ಶೆಟ್ಟಿ ತಂಡ ದಿಟ್ಟತನದಿಂದ ಎದುರಿಸಿದೆ ಎಂದು ಕನ್ನಡಪ್ರಭ ಚಿತ್ರವನ್ನು ವಿಷ್ಲೇಶಿಸಿದೆ.

ಅವನೇ ಶ್ರೀಮನ್ನಾರಾಯಣ ಸಿನಿಮಾ ನೋಡುತ್ತಾ…ನೋಡುತ್ತಾ ನಿಮಗೆ ಥಟ್ಟನೆ ಹಾಲಿವುಡ್ ನ ಪೈರೇಟ್ಸ್ ಆಫ್ ದಿ ಕೆರಿಬಿಯನ್” ಸಿನಿಮಾದ ನೆನಪು ಬಂದರು ಅಚ್ಚರಿ ಇಲ್ಲ. ಆದರೆ ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಎಬ್ಬಿಸಿದ ಭರ್ಜರಿ ಹವಾದ ನಂತರ ಮತ್ತೊಂದು ವಿಭಿನ್ನ ಕಥಾನಕದ ಸಿನಿಮಾ ಇದಾಗಿದೆ ಎಂದು ಹೇಳಬಹುದಾಗಿದೆ ಎಂಬುದು ಉದಯವಾಣಿ ಪತ್ರಿಕೆಯ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...