rajini rubbishes ನಾನು ಬಿಜೆಪಿ ಬಲೆಗೆ ಬೀಳುವುದಿಲ್ಲ: ರಜನಿಕಾಂತ್ ಗುಡುಗು

rajini rubbishes
tamil actor rajinikant

rajini rubbishes ನಾನು ಬಿಜೆಪಿಯವನಲ್ಲ ಎಂದು ಸಾರಿ ಹೇಳಿದ ಸೂಪರ್‌ಸ್ಟಾರ್ ರಜಿನಿ

ಚೆನ್ನೈ: ಭಾರತೀಯ ಜನತಾ ಪಕ್ಷದವರು ಏನೆಲ್ಲ ಪ್ರಯತ್ನ ( rajini rubbishes ) ಮಾಡಿದರೂ ನಾನು ಅವರು ಹಣೆವ ಬಲೆಗೆ ಬೀಳುವ ಆಸಾಮಿಯಲ್ಲ ಎಂದು ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‍ ರಜನಿಕಾಂತ್ ಅವರು ಘಂಟಾಘೋಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಟಿಪು ಜಯಂತಿ ರದ್ದು ಮರುಪರಿಶೀಲಿಸಿ: ಬಿಎಸ್ವೈ ಸರಕಾರಕ್ಕೆ ಹೈ ಆದೇಶ

ತಮಿಳಿನ ಪೂಜ್ಯ ಕವಿ ತಿರುವಳ್ಳುವರ್‍ ಅವರಿಗೆ ಮಾಡಿದಂತೆಯೇ ನನ್ನನ್ನೂ ಕೇಸರಿಕರಣ ಮಾಡಲು ಪಭಾರತೀಯ ಜನತಾ ಪಕ್ಷವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ ಸುಲಭವಾಗಿ ಅವರ ಬಲೆಗೆ ಬೀಳಬಹುದಾದ ವ್ಯಕ್ತಿ ನಾನಲ್ಲ ಎಂದು ರಜನಿಕಾಂತ್ ಶುಕ್ರವಾರ ಹೇಳಿದರು.

ತಿರುವಳ್ಳುವರ್ ಅವರ ಪ್ರತಿಮೆಗೆ ಕೇಸರಿ ಬಣ್ಣ ಬಳಿದಿರುವುದು ಭಾರತೀಯ ಜನತಾ ಪಕ್ಷದ ಅಜೆಂಡಾ ಎಂಬುದು ಸ್ಪಷ್ಟ. ಇದೊಂದು ಕುಕೃತ್ಯ. ಪ್ರತಿಮೆ ಕೇಸರಿ ಬಣ್ಣ ಬಳಿದ ಹಾಗೆ ನನ್ನ ವ್ಯಕ್ತಿತ್ವಕ್ಕೆ ಕೇಸರಿ ಬಳಿಯಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ರಜನಿಕಾಂತ್ ಗುಡುಗಿದ್ದಾರೆ.

ನಾನು ಬಿಜೆಪಿಯ ವ್ಯಕ್ತಿ ಎಂಬಂತೆ ಬಿಂಬಿಸುವ ಪ್ರಯತ್ನಗಳು ನಡೆದಿವೆ. ಆದರೆ ನಾನು ಯಾವ ಪಕ್ಷದ ಅಡಿಯಾಳೂ ಅಲ್ಲ, ಹಾಗೊಂದು ವೇಳೆ ಹೋಗಬೇಕೆಂದರೇ ನಾನೇ ನೇರವಾಗಿ ಯಾವುದಾದರೂ ಪಕ್ಷ ಸೇರಿಕೊಳ್ಳುತ್ತೇನೆ ಎಂದು ರಜನಿ ಹೇಳಿದರು.

ತಿರುವಳ್ಳುವರ್‍ ಪ್ರತಿಮೆಗೆ ಕೇಸರಿ ಬಣ್ಣ ಬಳಿದು ರಾರಾಜಿಸುವುದಕ್ಕೂ ಮಿಗಿಲಾದ ಜನರ ಸಂಕಷ್ಟಕ್ಕೆ ಮಿಡಿಯುವ ಕೆಲಸಗಳು ಸಾಕಷ್ಟಿವೆ. ಅವುಗಳಿಗೆ ನಾವು ಸ್ಪಂದಿಸಬೇಕಿದೆಯೇ ಹೊರತು ಇಂತಹ ಕ್ಷುಲ್ಲಕ ವಿಷಯಗಳಿಗಲ್ಲ ಎಂದು ರಜನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...