rajini ಮೋದಿ ಶಾ ಕೃಷ್ಣ ಅರ್ಜುನ ಇದ್ದಂತೆ: ರಜನಿಕಾಂತ್

rajini
pm modi and amit shah

rajini  ಯಾರು ಕೃಷ್ಣ, ಯಾರು ಅರ್ಜುನ ಗೊತ್ತಿಲ್ಲ ಎಂದ ಸೂಪರ್ ಸ್ಟಾರ್

ಚೆನ್ನೈ: ಕಾಶ್ಮೀರ ಕುರಿತ ದಿಟ್ಟ ನಿಲುವಿಗಾಗಿ ಪ್ರಧಾನಿ ಮೋದಿ ಹಾಗೂ ಗೃಹ ಮಂತ್ರಿ (rajini )ಅಮಿತ್ ಶಾ ಅವರನ್ನು ಸೂಪರ್ ಸ್ಟಾರ್ ರಜನಕಾಂತ್ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಕೈಲಾಗದೇ ಮೈ ಪರಚಿಕೊಂಡ ಪಾಕ್, ‘ರಾಜತಂತ್ರ’ಕ್ಕೆ ಕೊಕ್ಕೆ

ದೇಶದ ಹಿತದೃಷ್ಟಿಯಿಂದ ಅತ್ಯಗತ್ಯ ಆಗಿದ್ದ ಇಂತಹ ಗಟ್ಟಿ ತೀರ್ಮಾನ ತೆಗೆದುಕೊಂಡ ಮೋದಿ ಮತ್ತು ಶಾ ಅವರನ್ನು ರಜನಿ ಕೃಷ್ಣ ಮತ್ತು ಅರ್ಜುನನಿಗೆ ಹೋಲಿಸಿದ್ದಾರೆ.

ಕಾಶ್ಮೀರಕ್ಕೆ ಇದ್ದ ಪ್ರತ್ಯೇಕ ಸ್ಥಾನಮಾನ ರದ್ದು ಮಾಡಿದ್ದು ಸುಲಭದ ಮಾತಲ್ಲ. ಇಂತಹ ಕ್ರಮ ಕೈಗೊಳ್ಳಲು ಇಚ್ಛಾಶಕ್ತಿ ಬೇಕು. ಅದನ್ನು ಇವರಿಬ್ಬರೂ ತೋರಿದ್ದಾರೆ ಎಂದು ರಜನಿ ಕೊಂಡಾಡಿದ್ದಾರೆ.

ಮೋದಿ ಮತ್ತು ಶಾ ಅವರನ್ನು ಕೃಷ್ಣ ಹಾಗೂ ಅರ್ಜುನನಿಗೆ ಹೋಲಿಸಿದ ಸೂಪರ್ ಸ್ಟಾರ್ ರಜನಕಾಂತ್ ಆದರೆ ಇವರಿಬ್ಬರಲ್ಲಿ ಯಾರು ಕೃಷ್ಣ, ಯಾರು ಅರ್ಜುನ ಎಂಬುದೇ ತಿಳಿಯುತ್ತಿಲ್ಲ ಎಂದಿದ್ದಾರೆ.

ರಜನಿಕಾಂತ್ ಅವರು ಈಗಾಗಲೇ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ನಿರ್ಧಾರ ಪ್ರಕಟಿಸಿದ್ದು ತಮಿಳುನಾಡಿನಲ್ಲಿ ಮುಂಬರುವ ಅಸೆಂಬ್ಲಿ ಚುನಾವಣೆಗೆ ಸ್ಪರ್ಧೆ ಮಾಡವುದಾಗಿ ಹೇಳಿದ್ದಾರೆ. ರಜನಿಕಾಂತ್ ಬಿಜೆಪಿ ಹಾಗೂ ಅದರಲ್ಲಿಯೂ ಪ್ರಮುಖವಾಗಿ ಪ್ರಧಾನಿ ಮೋದಿ ಅವರ ಪರವಾಗಿ ಸಾಕಷ್ಟು ಬಾರಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...