21ಕ್ಕೆ ದಿಲ್ಲಿಯಲ್ಲಿ ರಾಹುಲ್ ಜೊತೆ ಸಂಪುಟ ವಿಸ್ತರಣೆ ಚರ್ಚೆ

ಬೆಂಗಳೂರು: ಒಂದು ರೀತಿಯಲ್ಲಿ ನಾಳೆ ಬಾ ಎನ್ನುವಂತಾಗಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕೊನೆಗೂ ಕಾರ್‍ಯರೋಪಕ್ಕೆ ಬರುವ ಲಕ್ಷಣಗಳು ಗೋಚರಿಸಿವೆ.

ಪಂಚ ರಾಜ್ಯಗಳಲ್ಲಿ ಚುನಾವಣೆ ಗೌಜಿನ ನಂತರ ಕರ್ನಾಟಕದತ್ತ ಕಣ್ಣ ಹಾಯಿಸಿರುವ ರಾಹುಲ್ ಗಾಂಧಿ ಸಂಭವನೀಯ ಸಚಿವಾಕಾಂಕ್ಷಿಗಳ ಪಟ್ಟಿಯೊಂದಿಗೆ ದಿಲ್ಲಿ ಬರಲು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: 22ಕ್ಕೆ ಸಂಪುಟ ವಿಸ್ತರಣೆಗೆ ಮುಹೂರ್ತ: ಸಿದ್ದರಾಮಯ್ಯ

ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಪರಮೇಶ್ವರ, ದಿನೇಶ್ ಗುಂಡೂರಾವ್ ಹಾಗೂ ಡಿಕೆ ಶಿವಕುಮಾರ್‍ ದಿಲ್ಲಿಗೆ ತೆರಳಲಿದ್ದಾರೆ. ಅಲ್ಲಿಯೇ ಇರುವ ಮಲ್ಲಿಕಾರ್ಜುನ ಖರ್ಗ ಸಹ ರಾಹುಲ್ ಜೊತೆ ಸಮಾಲಾಚನೆಯಲ್ಲಿ ಸೇರಿಕೊಳ್ಳಲಿದ್ದಾರೆ.

ರಾಜ್ಯ ಸರ್ಕಾರ ರಚನೆಯಾದ ದಿನದಿಂದ ತಲೆನೋವಾಗಿ ಪಡಿಣಮಿಸಿರುವ ವಿಸ್ತರಣೆಗೆ ಕೊನೆಗೂ ತೆರೆ ಎಳೆಯಲು ಸಮನ್ವಯ ಸಮಿತಿ ನಿರ್ಧರಿಸಿ ಇದೇ 22ರಂದು ಸಂಪುಟ ವಿಸ್ತರಣೆ ಮಾಡುವುದಾಗೊ ಘೋಷಿಸಿತ್ತು.

ಇದನ್ನೂ ಓದಿ: ಸಂಪುಟ ವಿಸ್ತರಣೆ ಮಾತು: ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಬೆಳವಣಿಗೆ

ಆದರೆ ರಾಹುಲ್ ಗಾಂಧಿ ಸಮಯಾವಕಾಶ ದೊರಕಿರಲಿಲ್ಲ. ಇದು ಆಕಾಂಕ್ಷಿಗಳ ಕಾತರವನ್ನು ಇನ್ನಷ್ಟು ಹೆಚ್ಚಿಸಿತ್ತು. ಆದರೆ ಈಗ ದಿಲ್ಲಿಯಿಂದ ಬುಲಾವ್‌ ಬಂದಿರುವುದರಿಂದ ಆಕಾಂಕ್ಷಿಗಳಲ್ಲಿ ಮತ್ತೆ ಆಸೆ ಚಿಗುರಿದೆ.

ಸಂಪುಟ ವಿಸ್ತರಣೆ ಜೊತೆಯಲ್ಲಿಯೇ ನಿಗಮ-ಮಂಡಳಿಗಳು ಹಾಗೂ ರಾಜಕೀಯ ಕಾರ್‍ಯದರ್ಶಿಗಳ ನೇಮಕವನ್ನೂ ಒಂದೇ ಏಟಿಗೆ ಮಾಡಿ ಮುಗಿಸುವುದು ರಾಜ್ಯ ನಾಯಕರ ಇಂಗಿತವಾಗಿದೆ.

ಎಂ.ಬಿ.ಪಾಟೀಲ್, ತನ್ವೀರ್ ಸೇಠ್, ಎಂಟಿಬಿ ನಾಗರಾಜು, ಡಾ.ಸುಧಾಕರ್, ಆನಂದ್ ಸಿಂಗ್, ಎಚ್‌.ಕೆ.ಪಾಟೀಲ್, ಬಿ.ಸಿ.ಪಾಟೀಲ್, ಮುನಿಯಪ್ಪ, ರಾಮಲಿಂಗಾ ರೆಡ್ಡಿ ಸೇರಿದಂತೆ ಇನ್ನೂ ಕೆಲವರು ಸಚಿವ ಸ್ಥಾನದ ರೇಸಿನಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...