rafale jet ಭಾರತದ ಕೈಸೇರಿದ ಮೊದಲ ರಫೇಲ್ ಯುದ್ಧ ವಿಮಾನ

rafale jet
defence minister rajnath singh receiving the rafale jet

rafale jet ವಾಯುಪಡೆಗೆ ಆನೆಬಲ ತುಂಬಲಿರುವ ರಫೇಲ್ ಜೆಟ್

ಮೆರಿನಾಕ್: ಭಾರತದ ವಾಯುಪಡೆಗೆ ಆನೆಬಲ ನಿಡಲಿರುವ ( rafale jet ) ರಫೇಲ್ ಯುಧವಿಮಾನ ಈಗ ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರಿದೆ. ಭಾರತ ಫ್ರಾನ್ಸ್ ಒಪ್ಪಂದದನ್ವಯ ಮೊದಲ ರಫೇಲ್ ಜೆಟ್ ಭಾರತದ ಕೈಸೇರಿದೆ.

ಇದನ್ನೂ ಓದಿ: ಭಾರತದ ಕೈಸೇರಿತು ಸ್ವಿಸ್ ಬ್ಯಾಂಕ್ ಕಾಳಕುಬೇರರ ಪಟ್ಟಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೊದಲ ರಫೇಲ್ ಜೆಟ್‌ ಅನ್ನು ಭಾರತೀಯ ವಾಯುಸೇನೆಗೆ ಬರಮಾಡಿಕೊಂಡರು. ಈ ಖರೀದಿಯಲ್ಲಿ ಅಕ್ರಮ ಇದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರಾದರೂ ಸುಪ್ರೀಂ ಕೋರ್ಟ್‌ ಅವೆಲ್ಲ ಆರೋಪಗಳನ್ನು ತಳ್ಳಿಹಾಕಿತ್ತು.

ಮೊದಲ ರಫೇಲ್ ಜೆಟ್ ಸ್ವೀಕರಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು ರಫೇಲ್ ಎಂದರೇ ಬಿರುಗಾಳಿ ಎಂಬರ್ಥ ಇದೆ. ಈ ಯುದ್ಧವಿಮಾನಗಳು ತಮ್ಮ ಹೆಸರಿಗೆ ತಕ್ಕಂತೆ ಭಾರತದ ರಕ್ಷಣೆಗೆ ನೆರವಾಗಲಿವೆ ಎಂದಬ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ವಿಜಯದಶಮಿ, ಅಂದೆ ದುಷ್ಟ ಶಕ್ತಿ ದಮನದ ದಿನ. ಜೊತೆಗೆ ಇಂದೇ ವಾಯುಪಡೆಯ 87ನೇ ವಾರ್ಷಿಕ ದಿನಾಚರಣೆ. ಇಂತಹ ಸಂದರ್ಭದಲ್ಲಿ ರಫೇಲ್ ಜೆಟ್ ಬರಮಾಡಿಕೊಳ್ಳುತ್ತಿರುವುದು ಖುಷಿಯ ವಿಚಾರ ಎಂದು ರಾಝನಾಥ್ ಸಿಂಗ್ ಹೇಳಿದರು.

ರಫೇಲ್ ಯುದ್ಧವಿಮಾನಗಳು ಇತ್ತೀಚಿನ ವರ್ಷಗಳಲ್ಲಿ ಭಾರತದ ಅತಿ ದೊಡ್ಡ ರಕ್ಷಣಾ ಖರೀದಿಯಾಗಿದ್ದು, 136 ಜೆಟ್‌ಗಳನ್ನು ಭಾರತವು ಫ್ರಾನ್ಸಿನಿಂದ ಖರೀದಿ ಮಾಡಲಿದೆ. ಮೊದಲ ಜೆಟ್‌ನ ಕೀಲಿ ಸ್ವೀಕರಿಸುವ ಮುನ್ನ ರಾಜನಾಥ್ ಸಿಂಗ್ ಅವರು ಯುದ್ಧ ವಿಮಾನಕ್ಕೆ ಶಸ್ತ್ರಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...