rachita ದಸರೆ ಎಂದರೆ ಸಂಭ್ರಮ, ನಾನು ದೇವಿಯ ಆರಾಧಕಿ: ರಚಿತಾರಾಮ್

rachita
film star rachita ram

rachita ದಸರಾ ಹಬ್ಬ ಎಂದರೆ ಅಚ್ಚುಮೆಚ್ಚು ಎಂದ ಡಿಂಪಲ್ ಕ್ಷೀನ್

ಬೆಂಗಳೂರು: ದಸರೆಯ ಸಂಭ್ರಮ ಎಲ್ಲೆಡೆ ತಾಂಡವವಾಡುತ್ತಿದೆ. ( rachita ) ನವರಾತ್ರಿಯ ಈ ಪುಣ್ಯ ಪರ್ವದಲ್ಲಿಯೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಮಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರಿದಂತೆ ಇಡೀ ಚಂದನವನ ದಸರೆಯ ಸಂತೋಷದಲ್ಲಿ ತುಂಬಿ ತುಳುಕುತ್ತಿದೆ.

ಇದನ್ನೂ ಓದಿ: ಅಧ್ಯಕ್ಷ ಇನ್ ಅಮೆರಿಕ: ನಗು ಜಾಸ್ತಿ, ಕಥೆ ನಾಸ್ತಿ

ಆಯುಧ ಪೂಜೆ, ವಿಜಯದಶಮಿಯ ಮೈಸೂರಿನ ಜಂಬೂಸವಾರಿ, ಪಂಜಿನ ಕವಾಯತು ಹೀಗೆ ಅನೇಕ ಕಣ್ಮನ ಸೆಳೆಯುವ ಕಾರ್‍ಯಕ್ರಮಗಳ ನಡುವೆ ಮನೆಯಲ್ಲಿ ಹಬ್ಬದ ವಾತಾವರಣಕ್ಕೆ ತಾರಾಮಣಿಗಳ ಮನೆಗಳೂ ಹೊರತಾಗಿಲ್ಲ.

ದಸರೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳೀ ದೇವಿಯ ದರ್ಶನ ಪಡೆಯಬೇಕೆಂಬುದು ರಚಿತಾ ರಾಮ್ ಅವರ ಮಹದಾಸೆ. ಆದರೆ ಜನ ದಟ್ಟಣೆಯ ಕಾರಣ ಅದು ಸಾಧ್ಯವಾಗದಿರಬಹುದು ಎಂಬ ಅನುಮಾನವೂ ಅವರಿಗೆ ಇದೆ.

ಒಂದು ವೇಳೆ ಚಾಮುಮಡಿ ದರ್ಶನ ಆಗದಿದ್ದರೇ ಬೆಂಗಳೂರಿನಲ್ಲಿರುವ ಬನಶಂಕರಿ ದೇವಿಯ ದರ್ಶನಕ್ಕಂತೂ ತೆರಳುತ್ತಾರಂತೆ ರಚಿತಾ. ಏಕೆಂದರೆ ಪತ್ರಿಕೆಯೊಂದಕ್ಕೆ ಅವರೇ ಹೇಳಿಕೊಂಡಿರುವಂತೆ ಅವರು ದೇವಿಯ ಆರಾಧಕಿಯಂತೆ.

ಇನ್ನೂ ಇದೇ ದಸರೆಯಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಹು ನಿರೀಕ್ಷಿತ ಯುವರತ್ನ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಗೆ ಸಿದ್ಧವಾಗಿದೆ. ಅಯುಧ ಪೂಜೆಯಂದು, ಅಂದರೆ ಸೋಮವಾರ ಸಂಜೆ ಯುವರತ್ನನ ಮೊದಲ ಅನುಭವ ಅಭಿಮಾನಿಗಳಿಗೆ ಒದಗಲಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...