2017 ಸಾಲಿನ ಪ್ರಶ್ನೆ ಪತ್ರಿಕೆ ಮೈಸೂರು ವಿವಿಯಲ್ಲಿ ಪುನರಾವರ್ತನೆ

ಮೈಸೂರು: ಮೈಸೂರು ವಿವಿಯಲ್ಲಿ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯನ್ನೇ ಯಾಥವತ್ ಆಗಿ ಪ್ರಸಕ್ತ ವರ್ಷವೂ ರಿಪೀಟ್ ಮುದ್ರಿಸಿ ಎಡವಟ್ಟು ಮಾಡಿಕೊಂಡಿದೆ.

ಎರಡು ದಿನಗಳ ಹಿಂದೆ  ಮೈಸೂರು ವಿವಿಯ ಮೊದಲ ಸೆಮಿಸ್ಟರ್ ಎಂ ಎಡ್ ಪರೀಕ್ಷೆ ನಡೆಯಿತು. ಶಿಕ್ಷಣ ವಿಷಯ ಕುರಿತ ಇಂಟರ್ ಡಕ್ಷನ್ ಆಫ್ ಎಜುಕೇಷನ್ ಸ್ಟಡೀಸ್ ವಿಷಯದ ಪರೀಕ್ಷೆಯಲ್ಲಿ ಮೈಸೂರು ವಿವಿ ತನ್ನ ಸೋಮಾರಿತನವನ್ನು ಪ್ರದರ್ಶಿಸಿದೆ. ಒಂದಲ್ಲ ಎರಡಲ್ಲ ಸಿರಿಯಲ್ ನಂಬರ್ ಸಮೇತ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳನ್ನೇ ಈ ವರ್ಷವೂ ಮುದ್ರಿಸಿ ಕೊಟ್ಟಿದೆ. ಇದು ಬೇಜಾವಾಬ್ದಾರಿಯೇ ಎನ್ನುವ ಪ್ರಶ್ನೆ ಎದ್ದಿದೆ.

UNIVERSITY OF MYSORE

ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು ಮಾಡಿದ್ದ ಬಗ್ಗೆ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಒಪ್ಪಿಕೊಂಡಿದ್ದು, 2017 ಪ್ರಶ್ನೆ ಪತ್ರಿಕೆ ಪುನರಾವರ್ತನೆಯಾಗಿದೆ. ಈ ಬಗ್ಗೆ ನನಗೂ ಮಾಹಿತಿ ಲಭ್ಯವಾಗಿದೆ. ಪರೀಕ್ಷೆಯ ಮಂಡಳಿ ಇದಕ್ಕೆಲ್ಲ ಹೊಣೆಯಾಗುತ್ತದೆ. ತಕ್ಷಣವೇ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಿರಿಯಲ್ ನಂಬರ್ ಸಮೇತ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯ ವಿಷಯದಲ್ಲಿ ವಿದ್ಯಾರ್ಥಿಗಳು ಮೈಸೂರು ವಿವಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...