ಸುಲಾವೇಸಿ ದ್ವೀಪಕ್ಕೆ ಅಪ್ಪಳಿಸಿದ ರಕ್ಕಸ ಅಲೆಗಳು

ಇಂಡೊನೇಶಿಯಾದ ಸುಲಾವೇಸಿ ದ್ವೀಪಕ್ಕೆ ಅಪ್ಪಳಿಸಿದ ಸುನಾಮಿ ಸುಮಾರು 400 ಮಂದಿಯ ಪ್ರಾಣ ತೆಗೆದಿದೆ. ಆಳ ಸಾಗರದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಉಂಟಾದ ಸುನಾಮಿಯಿಂದಾಗಿ 356ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನೊಡ ನೋಡುತ್ತಿದ್ದಂತೆಯೇ ಸುಮಾರು ೧೦ ಅಡಿ ಎತ್ತರದ ದೈತ್ಯ ಅಲೆಗಳು ದ್ವೀಪದ ಮೇಲೆ ಆಕ್ರಮಣ ನಡೆಸಿಸ ಅಮಾಯಕರ ಪ್ರಾಣದ ಜೊತೆ ಚೆಲ್ಲಾಟವಾಡಿದೆ. ಸುಮಾರು 3,50,000 ಜನರ ಬದುಕು ಅಪಾಯದಲ್ಲಿದೆ. ದ್ವೀಪದ ಅನೇಕ ಕಟ್ಟಡಗಳು ನೆಲಕ್ಕೆ ಉರುಳಿದ್ದು, ಜನರು ಜೀವಭಯದಲ್ಲಿದ್ದಾರೆ.

7.5 ತೀವ್ರತೆಯ ಪ್ರಬಲ ಭೂಕಂಪದ ಪರಿಣಾಮ ಸುನಾಮಿ ಅಲೆಗಳು ಎದ್ದವು. ಪರಿಹಾರ ಕಾರ್‍ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಜನ ಭಯಭೀತರಾಗಿ ಮನೆಗಳಿಂದ ಹೊರಗೆ ಧಾವಿಸಿ ಬಂದಿದ್ದಾರೆ. ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಬಿರುಕುಬಿಟ್ಟ ರಸ್ತೆಗಳಿಂದಾಗಿ ಸಂಪರ್ಕ ಕಡಿತಗೊಮಡಿದ್ದು, ವಿಮಾನ ನಿಲ್ದಾಣದ ರನ್​ವೇಗಳು ಸಹ ಹಾನಿಗೊಳಗಾಗಿವೆ. ಈ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಆದರೆ ಹೆಲಿಕ್ಯಾಪ್ಟರ್​ ಬಳಸಿಕೊಂಡು ರಕ್ಷಣಾ ಕಾರ್ಯ ನಡೆಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಬಂದ್​: ಸುನಾಮಿ ಅಲೆ ಹೊಡೆತಕ್ಕೆ ಸಿಲುಕಿರುವ ಪಲುವಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 24 ಗಂಟೆಗಳ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ, ಸುಲಾವೇಸಿ ದ್ವೀಪದಿಂದ 78 ಕೀಮಿ ದೂರದಲ್ಲಿ ವಿಮಾನ ನಿಲ್ದಾಣವಿದೆ.

ಕಳೆದ ಆಗಸ್ಟ್​ನಲ್ಲಿ ಕೂಡ ಲಾಂಬೋರ್ಕ್​, ಬಾಲಿಯಲ್ಲಿ ನಡೆದ ಭೂಕಂಪಕ್ಕೆ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದರು.

ಫೆಸಿಫಿಕ್​ ರಿಮ್​ ವಲಯದಲ್ಲಿ ಈ ಪ್ರದೇಶ ಬರುವುದರಿಂದ ಇಲ್ಲಿ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು ಸಾಮಾನ್ಯವಾಗಿದೆ. 2004ರಲ್ಲಿ ಸುಮಾತ್ರಾ ದ್ವೀಪದ ಬಳಿ ಭೂಕಂಪ ಸಂಭವಿಸಿ ಸಾವಿರಾರು ಜನರು ಸಾವನ್ನಪ್ಪಿದ್ದರು

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...