pujara joins 50ನೇ ಶತಕ ಬಾರಿಸಿ ದಿಗ್ಗಜರ ಪಟ್ಟಿ ಸೇರಿದ ಪೂಜಾರ

pujara joins
delighted pujara

pujara joins ಕರ್ನಾಟಕ ವಿರುದ್ಧ ರಣಜಿ ಪಂದ್ಯದಲ್ಲಿ ಪೂಜಾರ ವಿಕ್ರಮ

ರಾಜ್ಕೋಟ್: ಭಾರತದ ಅತ್ಯಂತ ಪ್ರತಿಭಾನ್ವತ ಮತ್ತು ನಂಬಿಕಸ್ಥ ಆಟಗಾರ (pujara joins) ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್ಟಿನಲ್ಲಿ 50ನೇ ಶತಕ ದಾಖಲಿಸುವ ಮೂಲಕ ಆ ಸಾಧನೆ ಮಾಡಿರುವ ದಿಗ್ಗಜ ಆಟಗಾರರ ಸಾಲಿಗೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಮಿಂಚಿದ ಕನ್ನಡಿಗ ರಾಹುಲ್, ಸೈನಿ; ಗೆದ್ದು ಬಿಗಿದ ಭಾರತ

ಕರ್ನಾಟಕದ ವಿರುದ್ಧ ಶನಿವಾರ ಆರಂಭವಾದ ನಾಲ್ಕು ದಿನಗಳ ರಣಜಿ ಪಂಸ್ಯದ ಮೊದಲ ದಿನ ಶತಕ (ಅಜೇಯ 162) ರನ್ ಬಾರಿಸುವ ಮೂಲಕ ಪೂಜಾರ ಈ ಸಾಧನೆ ಮಾಡಿದ ಭಾರತದ ಒಂಬತ್ತನೇ ಆಟಗಾರ ಎನಿಸಿದರು.

ತಲಾ 81 ಶತಕ ಬಾರಿಸಿರುವ ಗವಾಸ್ಕರ್ ಹಾಗೂ ಸಚಿನ್ ಅಗ್ರಸ್ಥಾನಿಗಳಾಗಿದ್ದರೇ 68 ಶತಕಗಳೊಂದಿಗೆ ರಾಹುಲ್ ದ್ರಾವಿಡ್ ಮೂರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ವಿಜಯ್ ಹಜಾರೆ, ವಾಸಿಮ್ ಜಾಫರ್, ದಿಲೀಪ್ ವೆಂಗ್ಸರ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಮೊಹಮ್ಮದ್ ಅಜರುದ್ದೀನ್ ಈ ಪಟ್ಟಿಯಲ್ಲಿದ್ದಾರೆ.

ಈ ಮಧ್ಯೆ ಕರ್ನಾಟಕದ ದುರ್ಬಲ ದಾಳಿಯ ಮೇಲೆ ಸವಾರಿ ಮಾಡಿದ ಪೂಜಾರ ಮತ್ತು 99 ರನ್ ಮಾಡಿರುವ ಶೆಲ್ಡನ್ ಜಾಕ್ಸನ್ ಅವರ ಅಧಿಕಾರಯುತ ಪ್ರದರ್ಶನದ ನೆರವಿನಿಂದ ಸೌರಾಆಷ್ಟ್ರ ಮೊದಲ ದಿನದಾಟದ ಅಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 296 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...