puc ದ್ವಿತೀಯ ಪಿಯು ಫಲಿತಾಂಶ ಪ್ರಕಟ, ಬಾಲಕಿಯರು ಮೇಲುಗೈ

ಬೆಂಗಳೂರು: ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಪರೀಕ್ಷಾ ( puc ) ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಈ ಬಾರಿ ಶೇ.61.73 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಎಂದಿನಂತೆ ಬಾಲಕಿಯರು ಮತ್ತು ಗ್ರಾಮೀಣರು ಮೇಲುಗೈ ಸಾಧಿಸಿದ್ದಾರೆ.

ಇದನ್ನೂ ಓದಿ: ಆಂಗ್ಲ ಮಾಧ್ಯಮಕ್ಕೆ ಸಾಹಿತಿಗಳ ಒಕ್ಕೊರಲ ವಿರೋಧ

ಕಳೆದ ಮಾರ್ಚ್‌ ಒಂದರಿಂದ 18ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷಯಲ್ಲಿ 6,71,653 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ 4,14,587 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

puc
pu results announcement

ಜಿಲ್ಲೆಗಳ ಪೈಕಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ದ್ವಿತೀಯ, ಕೊಡಗು ತೃತೀಯ ಹಾಗೂ ಚಿತ್ರದುರ್ಗ ಕೊನೆ ಸ್ಥಾನದಲ್ಲಿದೆ.

ಪರೀಕ್ಷೆ ಬರೆದವರ ಪೈಕಿ ಶೇ.68.24 ಬಾಲಕರು ಹಾಗೂ ಶೇ.61.38 ಬಾಲಕಿಯರು ಪಾಸಾಗಿದ್ದಾರೆ.

ಕಲಾ ವಿಭಾಗದಲ್ಲಿ ಶೇ.50.53, ವಾಣಿಜ್ಯದಲ್ಲಿ ಶೇ.66.39 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.66.58ರಷ್ಟು ಫಲಿತಾಂಶ ಬಂದಿದೆ.

ವಿಜ್ಷಾನ ವಿಭಾಗದ ಟಾಪರ್ಸ್

  • ಕೃತಿ ಮುತ್ತಗಿ ಸರ್ದಾರ್ ಪಟೇಲ್ ಪಿಯು ಕಾಲೇಜ್ ಬೆಂಗಳೂರು 597
  • ಮೋಹನ್ ಎಸ್ ಎಲ್ ಹೊಯ್ಸಳನಗರ ಪಿ ಯು ಕಾಲೇಜ್ ಹಾಸನ 595
  • ಎಸ್ ಆರ್ ಅನರ್ಘ್ಯ ಶಾರದಾ ಪಿಯ ಕಾಲೇಜ್ ಮಂಗಳೂರು 595

ಇನ್ನು 98 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 94 ಖಾಸಗಿ ಕಾಲೇಜುಗಳು, 3 ಸರ್ಕಾರಿ ಕಾಲೇಜು, 1 ಅನುದಾನಿತ ಪದವಿಪೂರ್ವ ಕಾಲೇಜಿನಲ್ಲಿ ಯಾವ ವಿದ್ಯಾರ್ಥಿಯೂ ಪಾಸಾಗಿಲ್ಲ.

ವಾಣಿಜ್ಯ ವಿಭಾಗದ ಅಗ್ರಸ್ಥಾನಿಗಳು

  • ವರ್ಷಿಣಿ ವಿದ್ಯಾಮಂದಿರ್ ಪಿ ಯು ಕಾಲೇಜ್ ಬೆಂಗಳೂರು 595
  • ಅಮೃತಾ ಎಸ್ ಆರ್ ಎ ಎಸ್ ಸಿ ಪಿಯು ಕಾಲೇಜ್ ಬೆಂಗಳೂರು 595
  • ಶುಭಾಂಕರ್ ಎ ಚೌಗುಲೆ ಆಳ್ವಾಸ್ ಪಿಯು ಕಾಲೇಜ್ ಮಂಗಳೂರು 594

ಕನ್ನಡ ಮಾಧ್ಯಮದಲ್ಲಿ ಶೇ.55.08ರಷ್ಟು, ಇಂಗ್ಲೀಷ್ ಮಾಧ್ಯಮದಲ್ಲಿ ಓದಿದವರು ಶೇ.66.90ರಷ್ಟು ಮಂದಿ ಪಾಸಾಗಿದ್ದಾರೆ. ಶೇ.60ಕ್ಕಿಂತ ಹೆಚ್ಚು ಅಂಕ ಪಡೆದು 2,27,301 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.

ಕಲಾ ವಿಭಾಗದ ಅಗ್ರರು

  • ಸ್ವಾತಿ ಎಸ್ ಇಂದು ಪಿಯು ಕಾಲೇಜ್ ಬಳ್ಳಾರಿ 595
  • ರಮೇಶ್ ಎಸ್ ವಿ ಇಂದು ಪಿಯು ಕಾಲೇಜ್ 594
  • ಗೊರವರ ಕಾವ್ಯಾಂಜಲಿ ಎಸ್ ವಿ ಇಂದು ಪಿಯು ಕಾಲೇಜ್ 586
ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...