priyanka ಉತ್ತರಪ್ರದೇಶಕ್ಕೆ ಪ್ರಿಯಾಂಕಾ ಶಿಫ್ಟ್?

priyanka
Priyanka gandhi

priyanka ಲಖನೌದಲ್ಲಿ ಮನೆ ಹುಡುಕಾಟದಲ್ಲಿರುವ ಪ್ರಿಯಾಂಕಾ

ಲಖನೌ: ಮುಂಬರುವ ವಿಧಾಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ( priyanka ) ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶಕ್ಕೆ ಶಿಫ್ಟ್ ಆಗುವ ಲಕ್ಷಣಗಳು ಗೋಚರಿಸಿವೆ.

ಇದನ್ನೂ ಓದಿ: ಸಿದ್ದರಾಮಯ್ಯ ನಾಯಕತ್ವಕ್ಕೆ ಮುಕ್ಕಾಲುಪಾಲು ಶಾಸಕರ ಒಲವು

ಲಖನೌದಲ್ಲಿ ವಾಸ್ತವ್ಯಕ್ಕೆ ಮನೆಯ ಹುಡುಕಾಟದಲ್ಲಿ ಪ್ರಿಯಾಂಕಾ ನಿರತರಾಗಿರುವುದು ಈ ನಿಟ್ಟಿನಲ್ಲಿ ಸ್ಪಷ್ಟ ಸಂಕೇತವಾಗಿದೆ ಎಂದು ಕಾಂಗ್ರೆಸ್ ವಲಸಯಗಳು ಹೇಳುತ್ತಿವೆ.

ಗಾಂಧಿ ಜಯಂತಿಯಂದು ಲಖನೌಗೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ ಭೇಟಿ ಸಂದರ್ಭದಲ್ಲಿ ಎರಡು ನಿವಾಸಗಳನ್ನು ಖುದ್ದು ಪರಿಶೀಲಿಸಿ ಹಿಂದಿರುಗಿದ್ದಾರೆ. ಇವೆರಡರಲ್ಲಿ ಒಂದು ಮನೆ ಪ್ರಿಯಾಂಕಾ ಗಾಂಧಿಗೆ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಎರಡರಲ್ಲಿ ಒಂದು ಮನೆ ಪಕ್ಷದ ಮುಖಂಡರೇ ಆಗಿರುವ ಶೀಲಾ ಕೌಲ್ ಅವರಿಗೆ ಸೇರಿದ್ದಾಗಿದ್ದ ಇದರ ಅಂಗಳದಲ್ಲಿ ದಶಕಗಳ ಹಿಂದೆ ಮಹಾತ್ಮ ಗಾಂಧಿ ನೆಟ್ಟಿದ್ದ ದೊಡ್ಡ ಆಲದ ಮರ ಇದ್ದು, ಪ್ರಿಯಾಂಕಾ ಬಹುತೇಕ ಇದೇ ಮನೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಪುನಶ್ಚೇತನ ನೀಡಲು ಪಣತೊಟ್ಟಿರುವ ಪ್ರಿಯಾಂಕಾ ಉತ್ತರಪ್ರದೇಶದಲ್ಲಿಯೇ ಹೆಚ್ಚು ಕಾಳ ಕಳೆಯುವ ಸಲುವಾಗಿ ಮನೆಯ ತಲಾಶೆ ನಡೆಸಿದ್ದಾರೆ. ಸದ್ಯ ಻ವರು ಇಲ್ಲಿ ಬಂದಾಗಲೆಲ್ಲ ಹೋಟೆಲುಗಳಲ್ಲಿ ಇಲ್ಲವೇ ಅತಿಥಿ ಗೃಹಗಳಲ್ಲಿ ಪ್ರಿಯಾಂಕಾ ವಾಸ್ತವ್ಯ ಹೂಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...