pragya ಮಹಾತ್ಮ ಗಾಂಧಿ ಹಂತಕನನ್ನು ದೇಶಭಕ್ತ ಎಂದ ಸಂಸದೆ ಸಾಧ್ವಿ

pragya
bjp mp from bhopal sadhvi pragya

pragya ಸಾಧ್ವಿ ಪ್ರಗ್ಯಾ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಿದ ಸ್ಪೀಕರ್

ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ ( pragya ) ನಾಥುರಾಂ ಗೋಡ್ಸೆಯನ್ನು ಬಿಜೆಪಿ ಸಂಸದರು ಮತ್ತೊಮ್ಮೆ ಹಾಡಿಹೊಗಳಿದ  ಪ್ರಸಂಗ ಲೋಕಸಭೆಯಲ್ಲಿ ಬುಧವಾರ ನಡೆಯಿತು.

ಇದನ್ನೂ ಓದಿ: ಮಿನಿಮಮ್ ಬ್ಯಾಲೆನ್ಸ್: ಜನರಿಂದ 2 ಸಾವಿರ ಕೋಟಿ ರೂ ಪೀಕಿದ ಬ್ಯಾಂಕುಗಳು

ಲೋಕಸಭೆಯಲ್ಲಿ ಎಸ್ಪಿಜಿಉ ಭದ್ರತಾ ತಿದ್ದುಪಡಿ ಮಸೂದೆ ವೇಳೆ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಭೋಪಾಲ ಸಂಸದೆ ಸಾಧ್ವಿ ಪ್ರಗ್ಯಾ ಗೋಡ್ಸೆ ಹೆಸರು ಹೇಳದೆ ದೇಶಭಕ್ತರ ಉದಾಹರಣೆ ಬೇಡ ಎಂದಾಗ ಪ್ರತಿಪಕ್ಷಗಳು ಅವರ ವಿರುದ್ಧ ಹರಿಹಾಯ್ದವು.

ಆಡಳಿತ ಪಕ್ಷದ ಸದಸ್ಯರು ಸಾಧ್ವಿ ಅವರನ್ನು ಸುಮ್ಮನೆ ಕೂರುವಂತೆ ಪುಸಲಾಯಿಸುತ್ತಿದ್ದಂತೆಯೇ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಬಂಧಿತ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಿದರು.

ಡಿಎಂಕೆ ಸಂಸದ ಎ ರಾಜಾ ಅವರು ಗೋಡ್ಸೆ ಮಹಾತ್ಮ ಗಾಂಧಿಯನ್ನು ಏಕೆ ಕೊಂದರು ಎಂದು ವಿವರಿಸಿದಾಗ, ದೇಶಭಕ್ತರನ್ನು ನೀವು ಉದಾಹರಣೆಯಾಗಿ ಕೊಡಬೇಡಿ ಎಂದು ಪ್ರಗ್ಯಾ ಠಾಕೂರ್, ರಾಜಾ ಅವರಿಗೆ ಹೇಳಿದರು.

ಗೋಡ್ಸೆ 32 ವರ್ಷಗಳಿಂದಲೂ ಗಾಂಧೀಜಿ ಮೇಲೆ ದ್ವೇಷ ಸಾಧಿಸುತ್ತಾ ಕೊನೆಗೆ ಹತ್ಯೆಗೈಯಲು ತಾನೇ ನಿರ್ಧರಿಸಿದ್ದ. ಗೋಡ್ಸೆ ಹೊಂದಿದ್ದ ಪ್ರತ್ಯೇಕ ಸಿದ್ಧಾಂತದಿಂದಾಗಿ ಗಾಂಧಿಯನ್ನು ಹತ್ಯೆ ಮಾಡಿದ ಎಂದು ಸಂಸದ ಎ.ರಾಜಾ ಹೇಳಿದರು. ಈ ವೇಳೆ ಪ್ರಗ್ಯಾ ಠಾಕೂರ್ ಮಧ್ಯೆ ಪ್ರವೇಶಿಸಿ, ಗೋಡ್ಸೆ ಒಬ್ಬ ದೇಶಭಕ್ತ ಅವರನ್ನು ಉದಾಹರಣೆಯಾಗಿ ಕೊಡಬೇಡಿ ಎಂದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...