petrol ಗಾಯದ ಮೇಲೆ ಬರೆ: ಪೆಟ್ರೋಲ್ ಡೀಸೆಲ್ ತುಟ್ಟಿ, ಚಿನ್ನವೂ ದುಬಾರಿ

ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ತಲಾ ಒಂದು ರೂ ಮೇಲ್ತೆರಿಗೆ ವಿಧಿಸಲಾಗಿದೆ

petrol
petrol bunk

petrol ಅಭಿವೃದ್ಧಿಗಾಗಿ ಇಂಧನಕ್ಕೆ ಮೇಲ್ತೆರಿಗೆ, ಚಿನ್ನ ಆಮದು ಸುಂಕ ಹೆಚ್ಚಳ

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ( petrol ) ಮಂಡಿಸಿದ ತಮ್ಮ ದೂರಗಾಮಿ ಅಭಿವೃದ್ಧಿ ಗುರಿಯ ಬಜೆಟ್‌ನಲ್ಲಿ ತಕ್ಷಣಕ್ಕೆ ಕೈಸುಟ್ಟುಕೊಳ್ಳುವವರ ಪೈಕಿ ವಾಹನ ಮಾಲೀಕರು, ಚಿನ್ನ ಖರೀದಿದಾರರು ಸೇರಿದ್ದಾರೆ.

ಇದನ್ನೂ ಓದಿ: ಆದಾಯ ತೆರಿಗೆದಾರರ ಕೈಗೆ ಚೊಂಬು ಕೊಟ್ಟ ನಿರ್ಮಲಾ

ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಮಧ್ಯಮ ವರ್ಗಕ್ಕೆ ನಿರಾಸೆ ಮೂಡಿಸಿದ ವಿತ್ತ ಸಚಿವರು ಈಗಲೇ ಗಗನದಲ್ಲಿ ಸಂಚರಿಸುತ್ತಿರುವ ಪೆಟ್ರೋಲ್, ಡೀಸೆಲ್‌ಗೆ ಮೇಲ್ತೆರಿಗೆಯ ತುಪ್ಪ ಸವರಿದ್ದಾರೆ.

ಅಭಿವೃದ್ಧಿಗೆ ಹಣ ಹೊಂದಿಸುವ ಮಹದಾಸೆಯಿಂದ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ತಲಾ ಒಂದು ರೂ ಮೇಲ್ತೆರಿಗೆ ವಿಧಿಸಿದ್ದಾರೆ.

ಇದೇ ವೇಳೆ ಚಿನ್ನ ಖರೀದಿದಾರರ ಜೇಬಿಗೂ ವಿತ್ತ ಸಚಿವರು ಕನ್ನ ಹಾಕಿದ್ದಾರೆ. ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ಹೆಚ್ಚಳ ಮಾಡಲಾಗಿದೆ.

ಈವರೆಗೆ ಶೇ. 10 ಇದ್ದ ಆಮದು ಸುಂಕವನ್ನು ವಿತ್ತ ಸಚಿವೆ ನಿರ್ಮಲಾ ಅವರು ಶೇ. 12.5ಕ್ಕೆ ಹೆಚ್ಚಳ ಮಾಡಿದ್ದು ಇದರಿಂದ ಚಿನ್ನಾಭರಣ ಇನ್ನಷ್ಟು ದುಬಾರಿಯಾಗಲಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...