pepper ಕಪ್ಪು ಬಂಗಾರ ಕಾಳು ಮೆಣಸು: ಅನೇಕ ರೋಗಗಳಿಗೆ ರಾಮ ಬಾಣ

pepper
black pepper

pepper ಅಚ್ಚರಿಪಡಿಸುವ ಕರಿಮೆಣಸಿನ ಹಲವು ಉಪಯೋಗಳು

ಕಪ್ಪು ಬಂಗಾರ ಕಾಳುಮೆಣಸು ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ( pepper ) ಆರೋಗ್ಯಕ್ಕೂ ಕೂಡ ಅಷ್ಟೇ ಸಹಾಯಕವಾದುದು. ಮೆಣಸಿನ ಪುಡಿಯ ಬದಲು ಕಾಳುಮೆಣಸು ಅಥವಾ ಕರಿ ಮೆಣಸನ್ನು ಬಳಸುವುದರಿಂದ ಸಾಕಷ್ಟು ಅನುಕೂಲತೆಗಳಿವೆ. ಕಾಳುಮೆಣಸು ಆಹಾರಕ್ಕೆ ಕೇವಲ ಫ್ಲೇವರ್ ನೀಡುವುದು ಮಾತ್ರವಲ್ಲ. ಇನ್ನೂ ಸಾಕಷ್ಟು ಉಪಯೋಗಗಳು ಇದರಲ್ಲಿವೆ.

ಇದನ್ನೂ ಓದಿ: ಕಬ್ಬಿನಹಾಲಿನ ಹಲವು ಅದ್ಭುತ ಪ್ರಯೋಜನಗಳು

ಕಾಮಾಲೆ ನಿವಾರಣೆ

ಪೇರಳೆ ಹಣ್ಣನ್ನು ಹೋಳು ಮಾಡಿ, ಜೀರಿಗೆ ಪುಡಿಯಲ್ಲಿ ಅದ್ದಿ ಒಂದು ರಾತ್ರಿ ಪೂರ್ತಿ ಮಂಜು ಬೀಳುತ್ತಿರುವ ಜಾಗದಲ್ಲಿಡಬೇಕು. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಎರಡು ವಾರಗಳವರೆಗೆ ಈ ರಸ ಕುಡಿಯುತ್ತಿದ್ದರೆ ಕಾಮಾಲೆ ನಿವಾರಣೆಯಾಗುತ್ತದೆ.

ಒಂದು ಬಟ್ಟಲಿನಷ್ಟು ಹಸುವಿನ ಹಾಲಿಗೆ ಒಂದು ಟೀ ಸ್ಪೂನಿನಷ್ಟು ಒಣಶುಂಠಿಯ ಪುಡಿಯನ್ನು ಬೆರೆಸಿ, ದಿನಕ್ಕೆ ಒಂದೆರೆಡು ಬಾರಿ ಸೇವಿಸುತ್ತಾ ಬಂದರೂ ಕಾಮಾಲೆಯಿಂದ ಪಾರಾಗಬಹುದು.

ಒಂದು ಟೀ ಸ್ಪೂನಿನಷ್ಟು ಹುಣಸೆಗೊಜ್ಜಿಗೆ ಅರ್ಧ ಟೀ ಸ್ಪೂನಿನಷ್ಟು ಜೀರಿಗೆಯ ಪುಡಿ, ಒಂದು ಚಮಚ ಜೇನು ತುಪ್ಪ ಸೇರಿಸಿ ಒಂದು ವಾರ ಸೇವಿಸಿದರೆ ಕಾಮಾಲೆ ದೂರವಾಗುವುದು.

ಮಾವಿನಕಾಯಿಗೆ ಕಾಳುಮೆಣಸು, ಜೇನುತುಪ್ಪವನ್ನು ಹಚ್ಚಿಕೊಂಡು ತಿನ್ನುತ್ತಿದ್ದರೆ ಪಿತ್ತಕೋಶ ಶುದ್ಧಿಯಾಗುವುದರ ಜತೆಗೆ ಪಿತ್ತರಸವೂ ವೃದ್ಧಿಸುತ್ತದೆ. ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ಜಗಿದು, ರಸವನ್ನು ನುಂಗುತ್ತಿದ್ದರೆ ಕಾಯಿಲೆ ಮಾಯವಾಗುವುದು. ಆದರೆ ಇದನ್ನು ಒಂದು ವಾರ ಮಾಡಬೇಕು.

ಜೀರ್ಣಕ್ರಿಯೆಗೆ ಉಪಯೋಗಿಸಿ

ಜೀರ್ಣಕ್ರಿಯೆಗೆ ಸಹಕರಿಸುತ್ತದೆ ಕಾಳುಮೆಣಸು ಅಥವಾ ಕರಿ ಮೆಣಸಿನಲ್ಲಿ ಇರುವ piperine ಅಂಶ ಜೀರ್ಣಕ್ರಿಯೆ ಹೆಚ್ಚಲು ಸಹಾಯಕ.ಇದು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ.ಇದು ಪ್ರೋಟಿನ್ ಮತ್ತಿತರ ಅಂಶಗಳನ್ನು ಹೀರಿಕೊಳ್ಳಲು ಸಹಕರಿಸುತ್ತದೆ.

ಅನೋರೆಕ್ಸಿಯಾದಿಂದ ಮುಕ್ತಿ ಕಾಳುಮೆಣಸು ರುಚಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಸುಗಮವಾಗಿಸಲು ಸಹಕಾರಿ. ಹಾಗೆಯೇ ಅನೋರೆಕ್ಸಿಯಾ (ಹಸಿವಾಗದಿರುವಿಕೆ)ಗೆ ಕೂಡ ಇದರಿಂದ ಮುಕ್ತಿ ಸಿಗುತ್ತದೆ.ಕಾಳುಮೆಣಸನ್ನು ಅಡುಗೆಯಲ್ಲಿ ಬಳಸುವುದರಿಂದ ಹಸಿವು ಹೆಚ್ಚುತ್ತದೆ.

ಸರಿಯಾಗಿ ಜೀರ್ಣ ಆಗದಿದ್ದಾಗ ವಾಯು, ಅಜೀರ್ಣ, ಭೇದಿ, ಮಲಬದ್ಧತೆ ಮತ್ತು ಆಮ್ಲೀಯತೆ ಆಗುವುದನ್ನು ಇದರಿಂದ ತಡೆಯಬಹುದು. ಹೈಡ್ರೋಕ್ಲೋರಿಕ್ ಆಮ್ಲ ಇವುಗಳನ್ನು ತಡೆಯುವಲ್ಲಿ ಸಹಕರಿಸುತ್ತದೆ.ಜೀರ್ಣ ಕ್ರಿಯೆಯನ್ನು ಸುಗಮವಾಗಿಸಲು ಖಾದ್ಯಗಳಿಗೆ ಒಂದು ಚಮಚ ಕಾಳುಮೆಣಸಿನ ಪುಡಿಯನ್ನು ಬಳಸಿ.ಇದು ಅಡುಗೆಗೆ ಫ್ಲೇವರ್ ನೀಡುವುದರ ಜೊತೆಗೆ ನಿಮ್ಮ ಹೊಟ್ಟೆಯನ್ನೂ ಸರಿಯಾಗಿ ಇಡುತ್ತದೆ.

ತೂಕ ಕಳೆದುಕೊಳ್ಳಿ

ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ ಕಾಳುಮೆಣಸು ಆಹಾರಕ್ಕೆ ಸರಿಯಾದ ಸಮೀಕರಣ (ಪೋಷಕಾಂಶಗಳನ್ನು ಹೊರತೆಗೆಯಲು) ಮಾಡಲು ಸಹಕರಿಸುತ್ತದೆ.ಇದರಲ್ಲಿ ಪ್ರಬಲವಾದ ಫೈಟೋನ್ಯೂಟ್ರಿಯೆಂಟ್ಸ್ ಅಂಶ ಇರುವುದರಿಂದ ಇದು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ.ಜೊತೆಗೆ ಇದು ದೇಹದ ಕಲ್ಮಶವನ್ನು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರ ವಿಸರ್ಜನೆ,ಬೆವರು ಇವುಗಳು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ.

ಇದರಿಂದ ದೇಹದ ತೂಕ ಕಡಿಮೆ ಆಗಲು ಸಹಾಯಕವಾಗುತ್ತದೆ.ಆಹಾರ ಪದಾರ್ಥಗಳ ಮೇಲೆ ಕಾಳುಮೆಣಸಿನ ಪುಡಿಯನ್ನು ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.ಆದರೆ ಹೆಚ್ಚು ಖಾರ ತಿನ್ನಬೇಡಿ ಇದರಿಂದ ಇತರ ತೊಂದರೆಗಳು ಕಾಣಿಸಿಕೊಳ್ಳಬಹುದು.

ಗ್ಯಾಸ್‌ ಕಡಿಮೆ ಮಾಡುತ್ತದೆ

ವಾಯು ಶಮನ ಮಾಡುತ್ತದೆ carminative ಗುಣವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಗ್ಯಾಸ್‌ಗೆ ಸಂಬಂಧಿಸಿದ ನೋವುಗಳನ್ನು ತಡೆಗಟ್ಟಲು ಕಾಳುಮೆಣಸು ಸಹಾಯಕ. ಅಡುಗೆಯಲ್ಲಿ ಮೆಣಸಿನ ಪುಡಿಯ ಬದಲು ಕಾಳುಮೆಣಸನ್ನು ಬಳಸುವುದರಿಂದ ಹೊಟ್ಟೆ ಉಬ್ಬರ ಅಥವಾ ವಾಯು ತುಂಬುವುದನ್ನು ತಡೆಯಬಹುದು.

ಕೂದಲಿಗೆ ತುಂಬ ಒಳ್ಳೆಯದು

ತಲೆಹೊಟ್ಟನ್ನು ಹೋಗಲಾಡಿಸುತ್ತದೆ ತಲೆಹೊಟ್ಟು ವಿರೋಧಿ ಶಾಂಪೂಗಳ ಬದಲು ಕಾಳುಮೆನಸನ್ನು ಬಳಸಿ ನೋಡಿ. ಕಾಳುಮೆಣಸಿನಲ್ಲಿ ಇರುವ ಜೀವವಿರೋಧಿ ಅಂಶ ತಲೆಹೊಟ್ಟು ಹೋಗಲಾಡಿಸಲು ಸಹಕರಿಸುತ್ತದೆ.ಒಂದು ಚಮಚ ಪುಡಿಮಾಡಿದ ಕಾಳುಮೆಣಸನ್ನು ಒಂದು ಲೋಟ ಮೊಸರಿನೊಂದಿಗೆ ಸೇರಿಸಿ ನೆತ್ತಿಗೆ ಹಚ್ಚಿ. ನಂತರ ಅರ್ಧ ಗಂಟೆ ಬಿಟ್ಟು ಕೂದಲನ್ನು ಸರಿಯಾಗಿ ತೊಳೆಯಿರಿ.ಹೆಚ್ಚು ಕಾಳುಮೆಣಸು ಬಳಸಬೇಡಿ ಇದರಿಂದ ತಲೆ ಸುಡುವ ಅನುಭವವಾಗಬಹುದು.

ಕೆಮ್ಮು ಮತ್ತು ನೆಗಡಿಗೆ

ಮೂಗು ಕಟ್ಟುವುದು ಮತ್ತು ಕೆಮ್ಮಿನಿಂದ ಮುಕ್ತಿ ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣ ಇದರಲ್ಲಿರುವದರಿಂದ ಕೆಮ್ಮು ಮತ್ತು ನೆಗಡಿಗೆ ಕಾಳುಮೆಣಸು ಪರಿಹಾರ ನೀಡುತ್ತದೆ. ಇದರ ಬಿಸಿ ಮತ್ತು ಖಾರದ ಗುಣ ಕಟ್ಟಿದ ಮೂಗನ್ನು ಕೂಡ ಸರಿಯಾಗಿಸುತ್ತದೆ. ರಸಂ ಮತ್ತು ಸೂಪ್‌ಗಳ ಮೇಲೆ ಕಾಳುಮೆಣಸಿನ ಪುಡಿ ಸಿಂಪಡಿಸಿ ಬಳಸುವುದರಿಂದ ಕೆಮ್ಮು ಮತ್ತು ನೆಗಡಿ ಕಡಿಮೆ ಆಗುತ್ತದೆ ಮತ್ತು ಉಸಿರಾಟವನ್ನು ಸರಾಗವಾಗಿಸುತ್ತದೆ.

ದಿನನಿತ್ಯ ಆಹಾರದಲ್ಲಿ ಇದನ್ನು ಬಳಸಿ ಮತ್ತು ಸಲಾಡ್‌ಗೆ ಇದನ್ನು ಸಿಂಪಡಿಸಿ ಬಳಸಿ.ಯಾವುದೇ ರೀತಿಯಲ್ಲಿ ಕಾಳುಮೆಣಸು ಬಳಸಿದರೂ ನಿಮ್ಮ ಆರೋಗ್ಯಕ್ಕೆ, ನಿಮ್ಮನ್ನು ಹೆಚ್ಚು ಚುರುಕುಗೊಳಿಸಿ, ಖಿನ್ನತೆಯಿಂದ ಹೊರಬರುವಂತೆ ಮಾಡಲು ಸಹಾಯಕವಾಗಿದೆ.

ಕ್ಯಾನ್ಸರ್ ತಡೆಯಲು ಸಹಕಾರಿ

ಕ್ಯಾನ್ಸರ್ ತಡೆಯಲು ಸಹಕರಿಸುತ್ತದೆ ಇದರಲ್ಲಿರುವ ಪಿಪರೀನ್ ಅಂಶ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾಳುಮೆಣಸು ಜೊತೆಗೆ ಅರಿಶಿಣ ಸೇರಿಸಿ ಬಳಸಿದರೆ ಅದರಲ್ಲಿ ಆಂಟಿಕ್ಯಾನ್ಸರ್ ಗುಣ ಹೆಚ್ಚಿರುತ್ತದೆ.

ಕಾಳುಮೆಣಸಿನಲ್ಲಿ ಪಿಪರೀನ್ ಜೊತೆಗೆ ವಿಟಮಿನ್ ಸಿ, ವಿಟಮಿನ್ ಎ, ಕ್ಯಾರೋಟಿನ್ಸ್, ಫ್ಲವೋನೈಡ್ ಮುಂತಾದವುಗಳು ಕ್ಯಾನ್ಸರ್ ಮತ್ತು ಇನ್ನಿತರ ಕಾಯಿಲೆಗಳು ಬರದಂತೆ ತಡೆಯಲು ಸಹಕರಿಸುತ್ತದೆ.

ಇತರ ಅಧ್ಯಯನಗಳ ಪ್ರಕಾರ ಕಾಳುಮೆಣಸಿನಲ್ಲಿ ಸಣ್ಣ ಕರುಳು ಮತ್ತು ದೊಡ್ಡ ಕರುಳಿನ ಕ್ಯಾನ್ಸರ್,ಚರ್ಮದ ಕ್ಯಾನ್ಸರ್ ಮುಂತಾದವುಗಳನ್ನು ತಡೆಗಟ್ಟುವ ಗುಣಗಳಿವೆ. ಪ್ರತಿದಿನ ಅಡುಗೆಯಲ್ಲಿ ಕಾಳುಮೆಣಸನ್ನು ಬಳಸಿ. ಅಡುಗೆಗೆ ಬಳಸುವ ಬದಲು ಹಾಗೆಯೇ ತಿಂದರೆ ಕೂಡ ಇನ್ನೂ ಒಳ್ಳೆಯದು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...