pejawara shree ರಾಮಮಂದಿರ ವಿಚಾರವಾಗಿ ಮುಂಚೂಣಿಯಲ್ಲಿ ನಿಂತ ಯತಿ ಪೇಜಾವರರು

pejawara shree
vishveshwar teertha swamiji

pejawara shree ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಕನಸು ಕಂಡಿದ್ದ ಶ್ರೀ ವಿಶ್ವೇಶ ತೀರ್ಥರು

ಬೆಂಗಳೂರು: ಭಾನುವಾರ ಬೆಳಗ್ಗೆ ಇಹಪಯಣ ಮುಗಿಸಿದ ಪೇಜಾವರ ( pejawara shree ) ಮಠಾಧೀಶ ಶ್ರೀ ವಿಶ್ವೇಶ ತೀರ್ಥರು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣದ ಮೂಲ ಕನಸುಗಾರರಲ್ಲಿ ಒಬ್ಬರಾಗಿದ್ದರು. ಈ ವಿಚಾರವಾಗಿ ನಡೆದ ಆಂದೋಲನಲ್ಲಿ ಪೇಜಾವರರು ಮುಂಚೂಣಿಯಲ್ಲಿ ನಿಂತ ಯತಿಗಳಾಗಿದ್ದರು.

ಇದನ್ನೂ ಓದಿ: ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ವೃಂದಾವನ, 3 ದಿನ ಶೋಕಾಚರಣೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲೇಬೇಕು ಎಂದು ಪ್ರಬಲವಾಗಿ ನಂಬಿದ್ದವರಲ್ಲಿ ಪೇಜಾವರ ಶ್ರೀಗಳು ಸಹ ಒಬ್ಬರಾಗಿದ್ದರು. ಇದಕ್ಕಾಗಿ ನಡೆದ ಅನೇಕ ಸಂಧಾನ, ರಾಜೀ ಸಭೆಗಳಲ್ಲಿ ಅವರು ಭಾಗವಹಿಸಿದ್ದರಲ್ಲದೇ ತಾವೇ ಅಂತಹ ಅನೇಕ ಸಭೆಗಳಿಗೆ ಆತಿಥ್ಯ ವಹಿಸಿದ್ದರು.

ರಾಮಮಂದಿರ ನಿರ್ಮಾ ದೇಶದ ಬಹುಸಂಖ್ಯಾತ ಹಿಂದೂಗಳ ದೊಡ್ಡ ಕನಸು ಎಂದು ನಂಬಿದ್ದ ವಿಶ್ವೇಶ ತೀರ್ಥ ಶ್ರೀಗಳು ಈ ಕುರಿತಾಗಿ ಸುಪ್ರೀಂ ಕೋರ್ಟು ಕಳೆದ ತಿಂಗಳು ನೀಡಿದ್ದ ತೀರ್ಪನ್ನು ಹರ್ಷದಾಯಕವಾಗಿ ಸ್ವಾಗತಿಸಿದ್ದರು.

ಪೇಜಾವರ ಶ್ರೀಗಳು ಕೇವಲ ಇದೊಂದೇ ವಿಚಾರದಲ್ಲಿ ಮಾತ್ರವಲ್ಲದೇ ಜಾತಿ, ಧರ್ಮಗಳ ನಡುವಿನ ಕಂದಕವನ್ನು ಒಡೆದುಹಾಕುವ ಪ್ರಯತ್ನಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು ಮತ್ತು ಅದಕ್ಕಾಗಿ ಕೆಲವೊಮ್ಮೆ ವಿವಾದಗಳಿಗೂ ಕಾರಣರಾಗಿದ್ದರು.

ಉಡುಪಿ ಶ್ರೀಕೃಷ್ಣಮಠದಲ್ಲಿ 2017ರಲ್ಲಿ ಮುಸ್ಲಿಮರಿಗೆ ಈದ್‌ ಉಪಾಹಾರವನ್ನು ಏರ್ಪಡಿಸಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ ಸ್ವಾಮೀಜಿಯವರು ಯಾವುದೇ ಕಾರಣಕ್ಕೂ ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ.

ಇದೇ ರೀತಿ ಅವರು ದಲಿತರ ಕೇರಿಗೆ ತಾವು ಹೋದಾಗಲೂ ಭಾರೀ ಕೋಲಾಹಲ ಉಂಟಾಗಿತ್ತು. ಅದೇ ರೀತಿ ಕುರುಬ ಸಮುದಾಯದವರಿಗೆ ಮಂತ್ರ ದೀಕ್ಷೆ ಕೊಡುವ ಮೂಲಕವು ಪೇಜಾವರ ಶ್ರೀಗಳು ವತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೂ ಮತೀಯ ಸೌಹಾರ್ದತೆಯ ಕಾರ್‍ಯಗಳಿಂದ ಅವರು ಹಿಂದಡಿ ಇಟ್ಟಿರಲಿಲ್ಲ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...