pejawara ದಲಿತರನ್ನ ಮುಖ್ಯವಾಹಿನಿಗೆ ತರಬೇಕು: ಪೇಜಾವರ ಶ್ರೀ

pejawara
pejawara seer vishwesha teertha swamiji

pejawara ಬಲಿಷ್ಠ ಹಿಂದೂ ಸಮಾಜಕ್ಕೆ ಏಕತೆ ಅಗತ್ಯ ಎಂದ ಶ್ರೀಗಳು

ಮೈಸೂರು: ಹಿಂದೂ ಧರ್ಮ ಬಲಗೊಳಿಸುವುದು ಎಂದರೇ ( pejawara) ದಲಿತ ವರ್ಗದವರನ್ನ ಮುಖ್ಯವಾಹಿನಿಗೆ ತರಬೇಕು. ಬೌದ್ಧ ಧರ್ಮ ಆಗಬಹುದು, ಜೈನ ಧರ್ಮ ಆಗಿರಬಹುದು ಅವರೆಲ್ಲರೂ ಹಿಂದೂಗಳೇ ಆಗಿದ್ದಾರೆ ಎಂದು ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ: ಪೇಜಾವರ ಶ್ರೀ ಜತೆ ರಾಷ್ಟ್ರಪತಿ ಕೋವಿಂದ್‌ ಮಾತುಕತೆ

ಪುರಾತನದಲ್ಲಿ ಎಲ್ಲರೂ ಹಿಂದೂಗಳೇ ಆಗಿದ್ದರು. ಕಾಲಾಂತರದಲ್ಲಿ ಈ ರೀತಿಯ ಪರಿಸ್ಥಿತಿಗಳು ಉದ್ಭವವಾಗಿದೆ. ಹೀಗಾಗಿ ಎಲ್ಲಾರೂ ಒಟ್ಟಾಗಿ ಸೋದರರಂತೆ ಬಾಳುವ ಮೂಲಕ ಹಿಂದೂ ಧರ್ಮವನ್ನ ಬಲಗೋಳಿಸಬೇಕು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ

ಎರಡು ತಿಂಗಳ ಕಾಲ ಮೈಸೂರಿನ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು ಲಿಂಗಾಯತರು ಸಹ ಹಿಂದೂಗಳೇ ಆಗಿದ್ದಾರೆ ಎಂದರು.

ಲಿಂಗ, ಇಷ್ಟಲಿಂಗ, ಶಿವನನ್ನು ಆರಾಧನೆ ಮಾಡುವ ಎಲ್ಲರೂ ಹಿಂದೂಗಳೇ ಆಗಿದ್ದಾರೆ. ವರ್ಣಾಶ್ರಮವನ್ನು ಒಪ್ಪಲಿ, ಒಪ್ಪದೇ ಇರಲಿ ಶಿವನ ಆರಾಧನೆ ಮಾಡಿದರೆ ಹಿಂದೂಗಳಾಗುತ್ತಾರೆ. ಹಿಂದೂಗಳೆಲ್ಲರೂ ಸಹೋದರರಂತೆ ಇರಬೇಕು ಎಂದ ಅವರು ಕರೆ ನೀಡಿದರು.

ಈ ವಿಚಾರದ ಬಗ್ಗೆ ಯಾವುದೇ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಹೇಳಿದ ಶ್ರೀಗಳು ನನ್ನೊಂದಿಗೆ ಸಂವಾದ ನಡೆಸುವ ಧೈರ್ಯ ಯಾರಿಗೂ ಇಲ್ಲ. ಪುಸ್ತಕ ಬರೆಯುತ್ತೇನೆ, ಪತ್ರದ ಮೂಲಕ ಚರ್ಚೆ ಮಾಡುತ್ತೇನೆ ಎನ್ನುತ್ತಾರೆ. ಆದರೆ ಮುಖಾಮುಖಿಯಾಗಿ ಸಂವಾದ ಮಾಡುವುದು ಒಳ್ಳೆಯದು ಎಂದರು

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...